ಲಾರಿ ಚಾಲಕರ ಸಂಘದಿಂದ ಪ್ರತಿಭಟನೆ

lorry drivers
ಶಿವಮೊಗ್ಗದಲ್ಲಿ ಲಾರಿ ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಣೇಶ್, ಸೈಯದ್ ಅಧೀಲ್, ಮುರುಗನ್, ಶಶಿಕುಮಾರ್, ದಾದಾಪೀರ್ ಇದ್ದರು.
Published on

ಶಿವಮೊಗ್ಗ: ಹಲವು ಬೆೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಲಾರಿ ಚಾಲಕರ ಸಂಘದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಹಲವು ಕಾನೂನುಗಳು ಲಾರಿ ಚಾಲಕರಿಗೆ ಮಾರಕವಾಗಿವೆ ಮತ್ತು ಹಿತಾಸಕ್ತಿಗೆ ವಿರುದ್ಧವಾಗಿವೆ. ಇಂತಹ ಅಸಂಬದ್ಧ ಕಾನೂನುಗಳನ್ನು ತಕ್ಷಣ ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಪರವಾನಗಿ ಪಡೆದಿರುವ ವಾಹನಗಳಲ್ಲಿ ಜಿಪಿಎಸ್ ಮತ್ತು ಪ್ಯಾನಿಕ್ ಬಾಟಂ ಅಳವಡಿಸಲು ಹೊರಡಿಸಿರುವ ಸುತ್ತೋಲೆ ಬಗ್ಗೆ ಮತ್ತು ರೆಟ್ರೋ ರಿಪ್ಲೆಕ್ಟ್ ಮತ್ತು ಕ್ಯೂರ್‌ಕೋಡ್ ಜಾರಿಗೆ ತರುತ್ತಿರುವ ಬಗ್ಗೆ ಹಾಗೂ ಭಾರತೀಯ ಮೋಟಾರ್ ವಾಹನ ಕಾಯ್ದೆಯಲ್ಲಿ ಇದ್ದ ದಂಡವನ್ನು 5 ಸಾವಿರದಿಂದ 20 ಸಾವಿರ ರೂ.ಗೆ ಏರಿಸಿರುವ ಬಗ್ಗೆ ಈ ಕಾನೂನುಗಳು ಜಾರಿಯಾಗುವುದರಿಂದ ಚಾಲಕರ ಆತ್ಮಸ್ಥೈರ್ಯವೇ ಸಂಪೂರ್ಣ ನಾಶವಾಗುತ್ತದೆ. ಇದರಿಂದ ಚಾಲಕರ ಕುಟುಂಬದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ದೂರಿದರು. ಚಾಲಕರಾದ ಗಣೇಶ್, ಸೈಯದ್ ಅಧೀಲ್, ಮುರುಗನ್, ಶಶಿಕುಮಾರ್, ದಾದಾಪೀರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net