ರೇಣುಕಸ್ವಾಮಿ ಹತ್ಯೆ ಖಂಡಿಸಿ ಪ್ರತಿಭಟನೆ

ರೇಣುಕಸ್ವಾಮಿ ಹತ್ಯೆ ಖಂಡಿಸಿ ಪ್ರತಿಭಟನೆ
Published on

ಸರಗೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಪವಿತ್ರಗೌಡ ವಿರುದ್ಧ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘ ಸಂಸ್ಥೆಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಸಂತೆ ಮಾಸ್ತಮ್ಮ ದೇವಾಲಯದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ತಹಸೀಲ್ದಾರ್ ರುಕೀಯಾ ಬೇಗಂ ಅವರಿಗೆ ಮನವಿ ಸಲ್ಲಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಡಿ.ಜಿ. ಶಿವರಾಜಪ್ಪ ಮಾತನಾಡಿ, ರೇಣುಕಸ್ವಾಮಿಯನ್ನು ಅಮಾನವೀಯವಾಗಿ ಹತ್ಯೆ ಮಾಡಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದರ್ಶನ್ ಅವರನ್ನು ಕನ್ನಡ ಚಿತ್ರರಂಗದಿಂದ ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಕೆ. ಗಿರೀಶ ಮಾತನಾಡಿ, ದರ್ಶನ್ ಕನ್ನಡ ಚಿತ್ರ ರಂಗಕ್ಕೆ ಕಪ್ಪು ಚುಕ್ಕೆ ಇದ್ದ ಹಾಗೆ, ಅವರನ್ನು ಚಿತ್ರ ರಂಗದಿಂದ ಅಮಾನತುಗೊಳಿಸಬೇಕು ಎಂದರು.

ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಎಸ್.ಎಸ್. ಪ್ರಭುಸ್ವಾಮಿ, ಕಾರ್ಯದರ್ಶಿ ಸಿದ್ದಪ್ಪ, ಶಿವಕುಮಾರ್, ನಟರಾಜು, ಗಣಪತಿ, ಮಹದೇವಸ್ವಾಮಿ, ಬಾಡಗ ಮಾದಪ್ಪ, ಕೆ.ಟಿ. ಮಹದೇವಪ್ಪ, ಕಾಟವಾಳು ಪರಶಿವಮೂರ್ತಿ, ಸುನಂದಾ ರಾಜ್, ಮೋಹನ್ ಕುಮಾರ್, ಬೃಂಗೇಶ್, ಭುವನೇಶ್, ಕೆಂಡಗಣ್ಣಸ್ವಾಮಿ, ಯೋಗೇಶ್, ಗಿರಿ ಕುಮಾರ್, ಪ್ರಕಾಶ್, ಜಯಕುಮಾರ್, ಸೋಮಶೇಖರ್, ದೊರೆಸ್ವಾಮಿ, ಬಸವರಾಜು, ಮಹೇಶ್, ನಿಜಪ್ಪ, ವಿನಾಯಕ ಪ್ರಸಾದ್, ಶಿವಕುಮಾರ್, ಸುರೇಶ್, ಶಿವಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net