ಮದ್ಯದಂಗಡಿ ತೆರೆಯಲು ವಿರೋಧಿಸಿ ಪ್ರತಿಭಟನೆ

Protest against opening of liquor shop
ಮದ್ಯದಂಗಡಿ ಆರಂಭಿಸಲು ವಿರೋಧಿಸಿ ಪ್ರಜಾತತ್ವ ರಾಷ್ಟ್ರೀಯ ಮಾನವ ಹಕ್ಕುಗಳ ಫೌಂಡೇಷನ್‌ನ ಜಿಲ್ಲಾ ಶಾಖೆ ಸದಸ್ಯರು ಪ್ರತಿಭಟನೆ ನಡೆಸಿದರು. ವೈ.ಎಸ್.ಜಗದೀಶ್, ನಾಗರಾಜ್, ದೇವರಾಜ್ ನಾಯಕ್, ಡಿ.ಕಿರಣ್, ಲತಾ, ಜೆ.ಎಂ.ರಮ್ಯಾ, ಮಾಲತಿ ಇದ್ದರು.
Published on

ಶಿವಮೊಗ್ಗ: ಗೋಪಾಳ ಬಡಾವಣೆಯ ನೂರಡಿ ರಸ್ತೆಯ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಬಾರದೆಂದು ಆಗ್ರಹಿಸಿ ಪ್ರಜಾತತ್ವ ರಾಷ್ಟ್ರೀಯ ಮಾನವ ಹಕ್ಕುಗಳ ಫೌಂಡೇಷನ್‌ನ ಜಿಲ್ಲಾ ಶಾಖೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಮದ್ಯದಂಗಡಿ ಆರಂಭವಾಗುತ್ತಿರುವ ಜಾಗದ ಅಕ್ಕಪಕ್ಕ ಮನೆಗಳಿದ್ದು, ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು, ವಯಸ್ಕರು, ಇತರೆ ಕೆಲಸಗಳಿಗಾಗಿ ತೆರಳುವ ನಿವಾಸಿಗಳಿಗೆ ತೊಂದರೆಯಾಗಲಿದೆ. ಮಾರಾಟ ಮಳಿಗೆಯಲ್ಲಿ ಮದ್ಯದಂಗಡಿ ಆರಂಭಿಸಲು ಮಾಲೀಕರು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನೂರಡಿ ರಸ್ತೆಯ ಪಕ್ಕದಲ್ಲಿ ನಾಲ್ಕು ರಸ್ತೆಗಳು ಕೂಡುವ ಪಕ್ಕದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅನುಮತಿ ನೀಡಬಾರದೆಂದು ಮನವಿ ಮಾಡಿಕೊಂಡರು. ಜಿಲ್ಲಾಧ್ಯಕ್ಷ ವೈ.ಎಸ್.ಜಗದೀಶ್, ನಾಗರಾಜ್, ದೇವರಾಜ್ ನಾಯಕ್, ಡಿ.ಕಿರಣ್, ಲತಾ, ಜೆ.ಎಂ.ರಮ್ಯಾ, ಮಾಲತಿ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net