ೈನಾನ್ಸ್ ಕಂಪನಿ ವಿರುದ್ಧ ಪ್ರತಿಭಟನೆ

bank
ೈನಾನ್ಸ್ ಕಂಪನಿಯ ದುರ್ವರ್ತನೆ ಖಂಡಿಸಿ ಕಂಪನಿಯೊಳಗೆ ರೈತ ಸಂಘದ ಮುಖಂಡರಾದ ಹಿಟ್ಟೂರು ರಾಜು, ನಾಗರಾಜ್, ಚಂದ್ರಯ್ಯ, ಭಾಗ್ಯಾ ರಾಘವೇಂದ್ರ, ಶೇಖರಪ್ಪ ಮತ್ತಿತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಜಾನುವಾರು ಸಾಕಣೆಗೆ ನೀಡಿದ್ದ ಸಾಲದ ಒಂದು ಕಂತನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ರೈತನ ಕೊಟ್ಟಿಗೆಯಲ್ಲಿದ್ದ ಎರಡು ಹಸು ಹಾಗೂ ಒಂದು ಎತ್ತನ್ನು ೈನಾನ್ಸ್ ಕಂಪನಿ ಸಿಬ್ಬಂದಿ ಕೊಂಡೊಯ್ದ ತಮ್ಮ ಕಚೇರಿ ಹೊರಗೆ ಕಟ್ಟಿ ಹಾಕಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸಿದ್ಲೀಪುರದ ಭರತ್ ಎಂಬ ರೈತ ೈನಾನ್ಸ್‌ನಿಂದ ಎರಡು ಲಕ್ಷ ರೂ. ಸಾಲ ಮಾಡಿ ಮೂರು ಹಸು ಖರೀದಿಸಿದ್ದರು. ಇದುವರೆಗೆ ಆತ ನಿಗದಿತ ಸಮಯಕ್ಕೆ 1.50 ಲಕ್ಷ ರೂ. ಪಾವತಿ ಮಾಡಿದ್ದರು. ಒಂದು ಕಂತಿನ ಬಾಬ್ತು 9,300 ರೂ. ಪಾವತಿ ಬಾಕಿಯಿತ್ತು.

ಹೀಗಾಗಿ ೈನಾನ್ಸ್ ಸಿಬ್ಬಂದಿ ಖಾಸಗಿ ವ್ಯಕ್ತಿಗಳೊಂದಿಗೆ ಆತನ ಮನೆಗೆ ತೆರಳಿ ಕೊಟ್ಟಿಗೆಯಲ್ಲಿದ್ದ ಎರಡು ಹಾಗೂ ಒಂದು ಎತ್ತನ್ನು ತಮ್ಮ ಕಚೇರಿಗೆ ತೆಗೆದುಕೊಂಡು ಬಂದಿದ್ದರು. ಈ ವಿಷಯ ರೈತ ಸಂಘದ ಮುಖಂಡರಿಗೆ ತಿಳಿಯುತ್ತಿದ್ದಂತೆಯೇ ಅವರೆಲ್ಲ ೈನಾನ್ಸ್ ಕಂಪನಿಗೆ ಬಂದು ಪ್ರತಿಭಟನೆ ಆರಂಭಿಸಿದರು.

ಹಸುಗಳು ಮತ್ತು ಎತ್ತಿಗೆ ಮೇವು, ನೀರು ನೀಡದೆ ೈನಾನ್ಸ್ ಕಂಪನಿಯವರು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ರೈತ ಇದುವರೆಗೂ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ್ದಾನೆ. ಆತನಿಗೆ ಸ್ವಲ್ಪ ಸಮಾಯಾವಕಾಶ ನೀಡಬೇಕೆಂದು ರೈತ ಸಂಘದ ಪ್ರಮುಖರಾದ ಹಿಟ್ಟೂರು ರಾಜು, ಚಂದ್ರಯ್ಯ, ರಾಘವೇಂದ್ರ, ಶೇಖರಪ್ಪ, ಪುರದಾಳು ನಾಗರಾಜ್, ಭಾಗ್ಯಾ ರಾಘವೇಂದ್ರ ಆಗ್ರಹಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಹಸುಗಳನ್ನು ಮರಳಿ ರೈತರ ಮನೆಗೆ ಕಳುಹಿಸಿದರು. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net