9 ಮಂದಿ ಒಡಿಶಾ ಕಾರ್ಮಿಕರ ರಕ್ಷಣೆ

klr odisha
ಕೋಲಾರ ತಾಲೂಕಿನ ಮೂರಂಡಹಳ್ಳಿ ಸಮೀಪದ ಇಟ್ಟಿಗೆ ಕರ್ಖಾನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಿಸಿದರು.
Published on

ಕೋಲಾರ: ತಾಲೂಕಿನ ಮೂರಂಡಹಳ್ಳಿ ಸಮೀಪದ ಎಸ್​ಬಿಡಬ್ಲು ಇಟ್ಟಿಗೆ ಕಾರ್ಖಾನೆಯಲ್ಲಿದ್ದ ಒಡಿಶಾ ಮೂಲದ ಮೂವರು ಅಪ್ರಾಪ್ತರು, ಇಬ್ಬರು ವೃದ್ಧರು ಸೇರಿ 9 ಮಂದಿ ಬಂಧಿತ ಕಾರ್ಮಿಕರನ್ನು ಜಿಲ್ಲಾ ಪೊಲೀಸ್​ ಇಲಾಖೆ, ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ವೇತನವಿಲ್ಲದೆ ಸುಮಾರು ವರ್ಷಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಎಚ್​.ಪಿ.ಎಸ್​.ಮೈತ್ರಿ, ತಹಸೀಲ್ದಾರ್​ ಡಾ.ನಯನಾ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು, ಗ್ರಾಮಾಂತರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಆಗ 9 ಮಂದಿಯನ್ನು ರಕ್ಷಿಸಿದ್ದು, ಸ್ವಗ್ರಾಮಕ್ಕೆ ತೆರಳಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net