ತಪ್ಪಿತಸ್ಥ ಕಾಂಗ್ರೆಸ್ಸಿಗರಿಗೆ ಸರ್ಕಾರದಿಂದಲೇ ರಕ್ಷಣೆ

11klr3A- k.s.manjunath gowda
Published on

ಕೋಲಾರ: ಕಾಂಗ್ರೆಸ್‌ನವರು ಮರ್ಡರ್ ಮಾಡಿದರೆ, ಲೂಟಿ ಮಾಡಿದರೂ ಕೇಳಲ್ಲ, ತಪು÷್ಪ ಮಾಡಿದವರಿಗೆ ರಕ್ಷಣೆ ನೀಡುವ ಮಟ್ಟಕ್ಕೆ ಸರ್ಕಾರ ಇದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈಗಿನ ಸರ್ಕಾರದ ಅವಽಯಲ್ಲಿ ಭ್ರಷ್ಟಚಾರ ತುಂಬಿ ತುಳುಕುತ್ತಿದೆ. ಅಽಕಾರಿಗಳ ವರ್ಗಾವಣೆಯಿಂದ ಹಿಡಿದು, ಜನರ ಕೆಲಸಗಳನ್ನು ಮಾಡಿಕೊಡುವ ತನಕ ದುಡ್ಡು ಕೊಡಲೇಬೇಕು. ಇದಕ್ಕೆ ದರಪಟ್ಟಿ ಹಾಕುವುದು ಒಂದು ಬಾಕಿ ಇದೆ ಎಂದು ವ್ಯಂಗ್ಯವಾಡಿದರು.

ತಹಸೀಲ್ದಾರ್, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿ ಇತರ ಅಽಕಾರಿಗಳು ಹುದ್ದೆಗೆ ಬರಬೇಕಾದರೆ ದುಡ್ಡುಕೊಟ್ಟು ಬರಬೇಕಾಗಿದೆ. ಈ ಹಿಂದೆ ರಾಜಕಾರಣಿಗಳು ಬಂದರೆ ಅಽಕಾರಿಗಳು ಭಯ ಪಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ರಾಜಕಾರಣಿಗಳು ಕೆಲಸವನ್ನು ನೇರವಾಗಿ ದುಡ್ಡಿನಲ್ಲಿ ಅಳತೆ ಮಾಡುತ್ತಾರೆ ಎಂದರೆ ಅನರ್ಥ ಎಂದು ಬೇಸರ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲೆಯಲ್ಲಿ ಬಗರ್ ಹುಕುಂ ಯೋಜನೆಯಡಿ ದೊಡ್ಡ ಅಕ್ರಮ ನಡೆದಿದೆ. ಕೆಐಡಿಬಿಗೆ ಎಲ್ಲಿ ಭೂಮಿ ಗುರುತಿಸಲಾಗಿದಿಯೋ ಆಭಾಗದಲ್ಲಿ ಜಮೀನಿಗೆ ಹೆಚ್ಚು ಬೇಡಿಕೆ ಇದೆ. ಅದ್ದರಿಂದ ಮಾಲೂರಿನಲ್ಲಿ ಭೂ ಅಕ್ರಮಗಳು ಜಾಸ್ತಿ ನಡೆದಿವೆ. ಮಾಲೂರಿನಲ್ಲಿ ೧೨೦ ಎಕರೆ ಜಮೀನು ಇಷ್ಟದ ಪ್ರಕಾರ ಖಾತೆ ಮಾಡಿಕೊಂಡಿದ್ದಾರೆ. ಜತೆಗೆ ಪಿ ನಂಬರ್ ಸಂಬAಽಸಿದ ಜಮೀನುಗಳು ನೋಂದಣಿ ಮಾಡುತ್ತಿದ್ದಾರೆ. ಕೋಮುಲ್ ವಿಚಾರವಾಗಿ ಇಡಿ ರೈಡ್ ಆಯಿತು, ಈಗ ಯಾಕೆ ನಿಂತೋಯಿತು. ಈ ಎಲ್ಲದರ ನಡುವೆ ಹೋರಾಟ ಗಟ್ಟಿಯಾಗಬೇಕಾಗಿದೆ ಎಂದು ಮಂಜುನಾಥ್‌ಗೌಡ ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಈ ಹಿಂದೆ ಬಿಜೆಪಿ ಎಲ್ಲಿತ್ತು, ಹಳೇ ಮೈಸೂರು ಭಾಗದಲ್ಲೀಗ ಬಿಜೆಪಿಗೆ ಶಕ್ತಿಯಿದ್ದು, ಯಾಕೋ ನಿರ್ಲಕ್ಷ÷್ಯಕ್ಕೆ ಒಳಗಾದಂತಾಗಿದೆ. ಕಾರ್ಯಕರ್ತರಿಗೆ ಉತ್ಸಾಹ ತುಂಬಬೇಕಾಗಿದೆ ಎಂದು ಮಂಜುನಾಥ್‌ಗೌಡ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಸಿವಿಲ್ ಕಾಮಗಾರಿಗಳಲ್ಲಿ ಶೇ.೪ರಷÀÄ್ಟ ಮೀಸಲಾತಿ ನೀಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಮಾ.೨೧ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾ ಕೇಂದ್ರದಲ್ಲಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕುರ ಪಾಲ್ಗೊಳ್ಳಬೇಕು ಎಂದು ಕೋರಿದರು. ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಮಂಡಲ ಅಧ್ಯಕ್ಷ ರಾಮಚಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ಅರುಣ ಮತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net