ಆಸ್ತಿ ವಿವಾದ; ಅಣ್ಣನಿಂದ ತಮ್ಮನ ಕೊಲೆ

WhatsApp Image 2024-02-21 at 7.26.48 PM
Published on

ಧಾರವಾಡ: ಆಸ್ತಿ ವಿವಾದ ಸಂಬ೦ಧ ಸಹೋದರರ ಮಧ್ಯೆ ಜಗಳ ನಡೆದು ತಮ್ಮನ ಕೊಲೆಯಲ್ಲಿ ಅಂತ್ಯಗೊ೦ಡ ಘಟನೆ ತಾಲೂಕಿನ ತಲವಾಯಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಆಶೋಕ ಕಮ್ಮಾರ (45) ಮೃತ ವ್ಯಕ್ತಿ. ಫಕ್ಕೀರಪ್ಪ ಕಮ್ಮಾರ (50) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹೋದರರಾದ ಫಕ್ಕೀರಪ್ಪ ಮತ್ತು ಅಶೋಕ ಮಧ್ಯೆ ಗ್ರಾಮದ ಜಾಗದ ವಿಚಾರವಾಗಿ ಜಗಳವಿತ್ತು. ಗ್ರಾಮದ ಹಿರಿಯ ಮಧ್ಯಸ್ಥಿಕೆಯಲ್ಲಿ ಕೆಲ ದಿನ ತಣ್ಣಗಾಗಿದ್ದ ಜಗಳ ಬುಧವಾರ ಮತ್ತೆ ಶುರುವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಕಲ್ಲು, ಬಡಿಗೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಲೆಗೆ ತೀವ್ರ ಪೆಟ್ಟು ತಗುಲಿ ಅಶೋಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಫಕ್ಕೀರಪ್ಪನಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net