

ನವದೆಹಲಿ: ಏನೋ ಹೇಳಲು ಹೋಗಿ ಅತ್ಯಾಚಾರದ ಬಗ್ಗೆ ಅಪಹಾಸ್ಯ ಮಾಡಿರುವ ಈ ಜಾಹಿರಾತಿನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದ್ದು, ಸಂಸ್ಥೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಎರಡು ಜಾಹಿರಾತುಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಇದನ್ನು ವೀಕ್ಷಿಸಿದ ಟ್ವಿಟರ್ ಬಳಕೆದಾರರು ಎಎಸ್ಸಿಐ ಗೆ ಟ್ಯಾಗ್ ಮಾಡಿ ದಯವಿಟ್ಟು ಇದರ ಪ್ರಸಾರಕ್ಕೆ ತಡೆಹಿಡಿಯಬೇಕೆಂದು ಮನವಿ ಮಾಡಿ ಅಭಿಯಾನವನ್ನೇ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಗೆ ನೊಟೀಸ್ ಜಾರಿ ಮಾಡಿದೆ.
ಸಾರ್ವಜನಿಕರ ಹಿತಾಸಕ್ತಿ ಇಲ್ಲದ ಹಾಗೂ ಸಮಾಜದಲ್ಲಿ ಇನ್ನಷ್ಟು ಅತ್ಯಾಚಾರ ಪ್ರಕರಣಗಳಿಗೆ ಪ್ರಚೋದಿಸುವಂತಿರುವ ಈ ಜಾಹಿರಾತನ್ನು ಕೂಡಲೇ ಹಿಂಪಡೆಯಬೇಕೆಂದು ಅಡ್ವರ್ಟೈಸ್ಮೆಂಟ್ ಸ್ಟಾಂಡರ್ಡ್ ಆಫ್ ಇಂಡಿಯಾ (ಎಎಸ್ಸಿಐ) ಎಚ್ಚರಿಕೆ ನೀಡಿದೆ.
ಶೂಟ್ ಎಂಬ ಹೆಸರಿನ ಬಾಡಿ ಸ್ಪ್ರೇ ಜಾಹಿರಾತು ಇದಾಗಿದ್ದು, ಇದರಲ್ಲಿ ಬಳಸಲಾಗಿರುವ ದೃಶ್ಯ ಹಾಗೂ ಪದಗಳು ಅತ್ಯಾಚಾರಕ್ಕೆ ಪ್ರೇರೇಪಿಸುವಂತಿದೆ. ಒಂದು ಜಾಹಿರಾತಿನಲ್ಲಿ ಕೋಣೆಯಲ್ಲಿ ಯುವಕ -ಯುವತಿ ಕುಳಿತಿರುತ್ತಾರೆ. ಇಲ್ಲಿ ನಾಲ್ವರು ಯುವಕರು ಬಂದು ಬಾಡಿ ಸ್ಪ್ರೇಯನ್ನು ಕೇಳುತ್ತಾರೆ. ಹಾಗೆ ಸೂಪರ್ ಮಾರ್ಕೆಟ್ನಲ್ಲಿ ಕೂಡ ಒಬ್ಬ ಯುವತಿಗೆ ನಾಲ್ವರು ಯುವಕರು ಬಾಡಿ ಸ್ಟ್ರೇ ಕೇಳುತ್ತಾರೆ. ಈ ಎರಡೂ ಜಾಹಿರಾತಿನಲ್ಲಿ ಬಳಸಿರುವ ಪದ ಅತ್ಯಾಚಾರಕ್ಕೆ ಪ್ರಚೋದಿಸುವಂತಿದೆ ಎಂಬುದು ಟ್ವಿಟ್ಟಿಗರ ಆರೋಪವಾಗಿದೆ. (ಏಜೆನ್ಸೀಸ್)