Loan ಕೊಡಿಸುವುದಾಗಿ ನಂಬಿಸಿ 39 ಸಾವಿರ ರೂ. ಮೌಲ್ಯದ ಚಿಕನ್​ ತಿಂದು ಕೈ ಕೊಟ್ಟ ಬ್ಯಾಂಕ್​ ಮ್ಯಾನೇಜರ್​

Chicken
Published on

ರಾಯ್​ಪುರ: ಕೋಳಿ ಫಾರಂ ಶುರು ಮಾಡಲು ಲೋನ್​ )Loan) ಕೊಡಿಸುವುದಾಗಿ ನಂಬಿಸಿ ಎಸ್​ಬಿಐ ಮ್ಯಾನೇಜರ್​ (Bank Manager) ಒಬ್ಬರು ರೈತನಿಂದ 39 ಸಾವಿರ ರೂ. ಮೌಲ್ಯದ ಚಿಕನ್​ ತಿಂದು ಸಾಲ ಕೊಡಿಸದೆ ವಂಚನೆ ಎಸಗಿರುವ ಘಟನೆ ಛತ್ತೀಸ್​ಗಢದ ಮಸ್ತೂರಿಯಲ್ಲಿ ನಡೆದಿದೆ. 

ಮಸ್ತೂರಿ ಪಟ್ಟಣದ ರೈತ ರೂಪ್​ಚಂದ್​ ಮನಹರ್​ ತನ್ನದೇ ಆದ ಸ್ವಂತ ಕೋಳಿ ಫಾರಂಅನ್ನು ಹೊಂದಿದ್ದಾರೆ. ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಎಸ್​ಬಿಐನಲ್ಲಿ ಲೋನ್​ಗೆ ಅಪ್ಲೈ ಮಾಡಿದ್ದಾರೆ. ಲೋನ್​ ಅಪ್ರೂವಲ್​ ಕೊಡುವುದಾಗಿ ಹೇಳಿದ ಬ್ರಾಂಚ್​ ಮ್ಯನೇಜರ್​ ತನಗೆ ಪ್ರತಿನಿತ್ಯ ಕೋಳಿ ಮಾಂಸ ತಂದುಕೊಡುವಂತೆ ರೈತನಿಗೆ ಸೂಚಿಸಿದ್ದಾನೆ.

Chicken

ಬೇಗ ಸಾಲ ಸುಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತ ರೂಪ್​​ಚಂದ್​ ಪ್ರತಿನಿತ್ಯ ಬಗೆಬಗೆಯ ಚಿಕನ್​ ಖಾದ್ಯಗಳನ್ನು ತಯಾರಿಸಿಕೊಂಡು ಬಂದು ಮ್ಯಾನೇಜರ್​ಗೆ ನೀಡಿದ್ದಾನೆ. ಇದಲ್ಲದೆ ಮ್ಯಾನೇಜರ್​ ರೈತನಿಂದ ಮುಂಗಡವಾಗಿ 10% ಕಮಿಷನ್​ ಪಡೆದಿದ್ದರು ಎಂದು ತಿಳಿದು ಬಂದಿದೆ. ದಿನಗಳು ಕಳೆದಂತೆ ಮ್ಯಾನೇಜರ್​ ಲೋನ್​ ಅಪ್ರೂವ್​ ಮಾಡದೆ ಇರುವುದನ್ನು ಕಂಡ ರೈತ ಬೇರೆ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಆತ ಮೋಸ ಹೋಗಿರುವುದು ತಿಳಿದಿದ್ದು, ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ದೂರಿನಲ್ಲಿ 39 ಸಾವಿರ ರೂ. ಮೌಲ್ಯದ ಕೋಳಿ ಮಾಂಸವನ್ನು ತಿಂದು ಮ್ಯಾನೇಜರ್​ ತನಗೆ ಮೋಸವನ್ನು ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಸ್‌ಬಿಐ ಶಾಖೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net