ನಿಮ್ಹಾನ್ಸ್​ನಲ್ಲಿ ಪ್ರಾಜೆಕ್ಟ್ ಆಫೀಸರ್ ಹುದ್ದೆಗೆ 90 ಸಾವಿರ ರೂ. ಸಂಬಳ..!

nimhans
Published on

ಬೆಂಗಳೂರು : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಜೆಕ್ಟ್ ಆಫೀಸರ್ -ಚೈಲ್ಡ್ ಪ್ರೊಟೆಕ್ಷನ್ -2, ಶಿಕ್ಷಣ-2, ಮಾನಸಿಕ ಆರೋಗ್ಯ-2 ಹುದ್ದೆಗಳಿವೆ. ಹುದ್ದೆಗಳಿಗನುಗುಣವಾಗಿ ಸೈಕಾಲಜಿ/ ಸಾಮಾಜಿಕ ಕಾರ್ಯ/ ಪಬ್ಲಿಕ್ ಪಾಲಸಿ/ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ, ಎಂ.ಫಿಲ್ ಕ್ಲಿನಿಕಲ್ ಸೈಕಾಲಜಿ ಪೂರೈಸಿ ಕಾರ್ಯಾನುಭವ ಹೊಂದಿರಬೇಕು.

ಗರಿಷ್ಠ ವಯೋಮಿತಿ 32 ವರ್ಷ ಹಾಗೂ ಮಾಸಿಕ ವೇತನ 90,000 ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್​ 5 ರ ವರೆಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net