'RRR'​​ ರೀತಿಯಲ್ಲೇ 'ಪ್ರಾಜೆಕ್ಟ್ ಕೆ' ಚಿತ್ರವನ್ನು ಪ್ರಚಾರ ಮಾಡಲು ಸಜ್ಜಾದ ಪ್ರಭಾಸ್-ನಾಗ್ ಅಶ್ವಿನ್?

Project K
Published on

ಆಂಧ್ರಪ್ರದೇಶ: ಟಾಲಿವುಡ್​​​ನ ರೆಬಲ್​​ ಸ್ಟಾರ್​​, ಡಾರ್ಲಿಂಗ್​​ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರ ಕಾಂಬಿನೇಷ್​​ನಲ್ಲಿ ಮೂಡಿಬರುತ್ತಿರುವ 'ಪ್ರಾಜೆಕ್ಟ್ ಕೆ' ಚಿತ್ರದ ಪ್ರಚಾರ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಚಿತ್ರತಂಡ ಸಜ್ಜಾಗಿದೆ ಎಂಬ ಸುದ್ದಿ ಇದೀಗ ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ಶೀಘ್ರದಲ್ಲೇ 'ಪ್ರಾಜೆಕ್ಟ್ ಕೆ' ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಅನ್ನು ಲಾಂಚ್ ಮಾಡಲು ವಿಭಿನ್ನ ಪ್ರಯತ್ನಗಳತ್ತ ಸಾಗಿದೆ. ದೊಡ್ಡ ಬಜೆಟ್‌ನಲ್ಲಿ ಸೈನ್ಸ್​-ಫಿಕ್ಷನ್​​ (Sci-Fi) ಥ್ರಿಲ್ಲರ್‌ ಹೊಂದಿರುವ ಈ ಚಿತ್ರಕ್ಕೆ, ಬಿಡುಗಡೆಗೂ ಮುನ್ನ ಹಾಲಿವುಡ್ ಅಂಗಳದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲು ಚಿತ್ರತಂಡ ಯೋಜಿಸಿದೆ ಎಂದು ವರದಿ ಹೇಳಿದೆ.

ಈ ಹಿಂದೆ ನಿರ್ದೇಶಕ ರಾಜಮೌಳಿ ಅವರ ಆರ್​ಆರ್​​ಆರ್​​ ಚಿತ್ರವು ಬಿಡುಗಡೆಗೂ ಮುನ್ನ ಮತ್ತು ರಿಲೀಸ್ ಬಳಿಕ ಹಲವು ಆಂಗ್ಲ ಮಾಧ್ಯಮಗಳ ಜತೆ ವಿಶೇಷ ಸಂದರ್ಶನ, ಮಾತುಕತೆಯಲ್ಲಿ ಭಾಗಿಯಾಗಿತ್ತು. ಇದೇ ರೀತಿಯಲ್ಲಿ ಪ್ರಾಜೆಕ್ಟ್​​ ಕೆ ಸಿನಿಮಾದ ಪ್ರಚಾರವನ್ನು ವಿದೇಶದ ಮಟ್ಟದಲ್ಲಿ ಮಾಡಬೇಕು ಎಂಬುದು  ಚಿತ್ರತಂಡದ ಗುರಿಯಾಗಿದೆ ಎಂದು ಇತ್ತೀಚಿನ ವರದಿ ಹೇಳಿದೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net