ಅಟಲ್‌ಜೀ ಅವಧಿಯಲ್ಲಿ ದೇಶದ ಪ್ರಗತಿ

atalji
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವದ ಅಂಗವಾಗಿ ಭದ್ರಾವತಿ ಬಿಜೆಪಿ ಕಚೇರಿಯಲ್ಲಿ ನೂರು ದೀಪಗಳನ್ನು ಬೆಳಗಿಸಲಾಯಿತು. ಜಿ.ಧರ್ಮಪ್ರಸಾದ್, ರಾಜಶೇಖರ್, ಚನ್ನೇಶ್, ಡಿ.ಆರ್.ಸಾಗರ್ ಇತರರಿದ್ದರು.
Published on

ಭದ್ರಾವತಿ: ನಗರದ ಬಿಜೆಪಿ ಮಂಡಲ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ ಆಚರಿಸಲಾಯಿತು.

ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಕಚೇರಿ ಆವರಣವನ್ನು ಸ್ವಚ್ಛಗೊಳಿಸಿ 100 ದೀಪಗಳನ್ನು ಬೆಳಗಿಸಿದರು.

ಕವಿ ಹೃದಯದ ಅಟಲ್‌ಜೀ ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಆಡಳಿತದಲ್ಲಿ ದೇಶದ ಪ್ರಗತಿಗೆ ಹೊಸ ದಾರಿ ಸಿಗುವ ಜತೆಗೆ ವಿದೇಶಾಂಗ ನೀತಿಯಲ್ಲಿ ಹೊಸ ದಿಕ್ಕನ್ನು ತೋರಿತು ಎಂದು ವಕೀಲ ಕೆ.ಎನ್.ಶ್ರೀಹರ್ಷ ಅಭಿಪ್ರಾಯಪಟ್ಟರು.

ರಾಷ್ಟ್ರದ ಸಮಸ್ಯೆಗಳಿಗೆ ದೂರದೃಷ್ಟಿಯ ಪರಿಹಾರ ಮಾರ್ಗಗಳನ್ನು ಕಂಡವರು ಅಟಲ್‌ಜೀ. ಅವರಿಗೂ ನಗರಕ್ಕೂ ಅವಿನಾಭಾವ ಸಂಬಂಧವಿದೆ. 1984ರ ಲೋಕಸಭಾ ಚುನಾವಣೆಯಲ್ಲಿ ಗ್ವಾಲಿಯರ್ ಕ್ಷೇತ್ರದಿಂದ ಸ್ಪರ್ಧಿಸಿ ವಾಜಪೇಯಿ ಸೋಲು ಕಂಡಿದ್ದರು. ಇದರಿಂದ ಮನನೊಂದು ಹೊಸಸಿದ್ದಾಪುರದ ಲಕ್ಷ್ಮೀನಾರಾಯಣ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ವಾಜಪೇಯಿ ಅವರು ಮೃತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು ಎಂದಿಗೂ ಮರೆಯುವಂತಿಲ್ಲ ಎಂದರು.

ಮಂಡಲದ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಸುಶಾಸನ ದಿನದ ಸಂಚಾಲಕ ಡಿ.ಆರ್.ಸಾಗರ್, ಸಹ ಸಂಚಾಲಕ ಕಲ್ಲೇಶ್, ಪ್ರಮುಖರಾದ ಸಿಮೆಂಟ್ ಮಂಜಣ್ಣ, ರಾಜಶೇಖರ್, ರಾಮಲಿಂಗಯ್ಯ, ಧನುಷ್ ಬೋಸ್ಲೆ, ಪ್ರಸನ್ನಕುಮಾರ್, ಸಚ್ಚಿದಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net