ಎಬಿಎಸ್‌ಎಸ್ ಯೋಜನೆ; ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಅಭಿವೃದ್ಧಿ ಕಾಣುತ್ತಿವೆ ನಿಲ್ದಾಣಗಳು!

Train
Published on

ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ (ABSS) ಅಡಿಯಲ್ಲಿ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ಬೆಂಗಳೂರು ವಿಭಾಗದಾದ್ಯಂತ ಪ್ರಮುಖ ನಾನ್-ಸಬರ್ಬನ್ ಗ್ರೇಡ್ (NSG) ನಿಲ್ದಾಣಗಳ ಆಧುನೀಕರಣ, ಮೂಲಸೌಕರ್ಯಗಳ ವೃದ್ಧಿ ಮತ್ತು ಪ್ರಯಾಣಿಕರಿಗೆ ನವೀನ ರೀತಿಯ ಪ್ರಯಾಣದ ಅನುಭವವನ್ನು ನೀಡುವುದು ಈ ಮಹತ್ವಾಕಾಂಕ್ಷೆಯ ಯೋಜನೆಯ ಉದ್ದೇಶವಾಗಿದೆ.

ಬಂಗಾರಪೇಟೆ(NSG-3): ಒಟ್ಟು ರೂ.21.59 ಕೋಟಿಗಳ ಯೋಜನಾ ವೆಚ್ಚದೊಂದಿಗೆ, ಅಭಿವೃದ್ದಿ ಕಾಣುತ್ತಿರುವ ಈ ನಿಲ್ದಾಣದಲ್ಲಿ, ಇಲ್ಲಿಯವರೆಗೆ ಶೇ.22 ರಷ್ಟುಕಾಮಗಾರಿ ಪೂರ್ಣಗೊಂಡಿದೆ.

ಚನ್ನಪಟ್ಟಣ (NSG-4) ನಿಲ್ದಾಣದ ಅಭಿವೃಧ್ದಿಯಲ್ಲಿ ಶೇ.33 ಕಾಮಗಾರಿಗಳು ಪೂರ್ಣಗೊಂಡಿದ್ದು, ಒಟ್ಟು ನಿಯೋಜಿತ ಮೊತ್ತದಲ್ಲಿ ಶೇ.27.42(ರೂ.5.74 ಕೋಟಿಗಳು) ಹಣ ವ್ಯಯಿಸಲಾಗಿದೆ. ರೂ.20.93 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ನಿಲ್ದಾಣ ಅಭಿವೃದ್ದಿ ಕೈಗೆತ್ತಿಕೊಳ್ಳಲಾಗಿದೆ. .

ಧರ್ಮಪುರಿ (NSG-5) ನಿಲ್ದಾಣದ ಶೇ.28ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ರೂ.2.70 ಕೋಟಿ (ಶೇ.12,65) ಖರ್ಚು ಮಾಡಲಾಗಿದೆ. ರೂ.21.34 ಕೋಟಿ ಮೊತ್ತದಲ್ಲಿ ಧರ್ಮಪುರಿ ನಿಲ್ದಾಣ ಅಭಿವೃದ್ದಿ ಕಾಣುತ್ತಿದೆ.

ದೊಡ್ಡಬಳ್ಳಾಪುರ (NSG-5) ನಿಲ್ದಾಣದ ನವೀಕರಣವು ಕಾಮಗಾರಿ ಶೇ.25ರಷ್ಟು ಈಗಾಗಲೇ ಪೂರ್ಣಗೊಂಡಿಡ್ಡು ರೂ.3.54 ಕೋಟಿ (ಶೇ13.92) ವ್ಯಯಿಸಲಾಗಿದೆ. ಈ ನಿಲ್ದಾಣವನ್ನು ರೂ.25.42 ಕೋಟಿ ಮೊತ್ತದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.

ಹಿಂದೂಪುರ (NSG-4) ನಿಲ್ದಾಣದ ಅಭಿವೃದ್ದಿ ಭರದಿಂದ ಸಾಗಿದ್ದು 4.09 ಕೋಟಿ ರೂ.(ಶೇ 17.06) ವ್ಯಯದಲ್ಲಿ ಸುಮಾರು ಶೇ.28 ಕಾಮಗಾರಿಗಳು ಪೂರ್ಣಗೊಂಡಿದೆ.

ಹೊಸೂರು (NSG-4) ನಿಲ್ದಾಣ 22.35 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ನಿಲ್ದಾಣದ ಅಭಿವೃದ್ದಿಯಲ್ಲಿ, ಇಲ್ಲಿಯವರೆಗೆ ಶೇ.30ರಷ್ಟು ಕಾಮಗಾರಿಗಳು ರೂ 2.66 ಕೋಟಿ ಮೊತ್ತದಲ್ಲಿ ಪೂರ್ಣಗೊಂಡಿದೆ.

ಕೆಂಗೇರಿ (NSG-3) ರೂ.21.02 ಕೋಟಿ ವೆಚ್ಚದಲ್ಲಿ ಅಭಿವೃಧ್ದಿ ಕಾಣುತ್ತಿದ್ದು, ಈಗಾಗಲೇ ಶೇ.37 ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು ನಿಯೋಜಿತ ವೆಚ್ಚದಲ್ಲಿ ರೂ.4.30 ಕೋಟಿಗಳಷ್ಟು ವ್ಯಯಿಸಲಾಗಿದೆ.

ಕೃಷ್ಣರಾಜಪುರಂ (NSG-3) ನಿಲ್ದಾಣದಲ್ಲಿ ಶೇ.27 ಕಾಮಗಾರಿ ಪೂರ್ಣಗೊಂಡಿದ್ದು, ಯೋಜನಾ ಮೊತ್ತವಾದ ರೂ.21.11 ಕೋಟಿಯಲ್ಲಿ 2.50 ಕೋಟಿ ರೂ. ಖರ್ಚು ಮಾಡಲಾಗಿದೆ.

ಕುಪ್ಪಂನಲ್ಲಿ (NSG-4), ಕುಪ್ಪಂ ನಿಲ್ದಾಣದವು ಶೇ37 ಅಭಿವೃದ್ದಿಕಾಮಗಾರಿಗಳು ಪೂರ್ಣಗೊಂಡಿದ್ದು, ನಿಗದಿಪಡಿಸಿದ ₹17.60 ಕೋಟಿಯಲ್ಲಿ ರೂ.3.87 ಕೋಟಿಗನ್ನು (21.98%)ವ್ಯಯಿಸಲಾಗಿದೆ.

ಮಲ್ಲೇಶ್ವರಂ (NSG-5) : ಮಲ್ಲೇಶ್ವರಂ ನಿಲ್ದಾಣದಲ್ಲಿ ಶೇ 35ರಷ್ಟು ಭೌತಿಕ ಕೆಲಸಗಳು ಮುಗಿದಿದ್ದು, ಒಟ್ಟು 19.95 ಕೋಟಿ ಬಜೆಟ್‌ನಲ್ಲಿ 6.(32.08%) ಕೋಟಿ ಖರ್ಚು ಮಾಡಲಾಗಿದೆ.

ಮಾಲೂರು (NSG-4), ಮಾಲೂರು ನಿಲ್ದಾಣಕ್ಕೆ ನಿಯೋಜಿಸಿರುವ ಒಟ್ಟು 20.44 ಕೋಟಿ ವೆಚ್ಚದಲ್ಲಿ ರೂ. 4.20 ಕೋಟಿ ವ್ಯಯಿಸಿ ಸುಮಾರು ಶೇ.40 ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಮಂಡ್ಯ (NSG-3) ಮಂಡ್ಯದಲ್ಲಿ ಶೇ 32 ರಷ್ಟು ಕೆಲಸ ಪೂರ್ಣಗೊಂಡಿದ್ದು, ಒಟ್ಟು 20.11 ಕೋಟಿ ಬಜೆಟ್‌ನಲ್ಲಿ 5.79 ಕೋಟಿ(ಶೇ. 28.79) ಖರ್ಚು ಮಾಡಲಾಗಿದೆ.

ರಾಮನಗರಂ (NSG-4) ರಾಮನಗರಂ ನಿಲ್ದಾಣದ ಅಭಿವೃದ್ದಿ ಕಾರ್ಯ ಉತ್ತಮ ಪ್ರಗತಿಯಲ್ಲಿದೆ. ಈಗಾಗಕೇ ಶೇ.42 ರಷ್ಟು ಕಾಮಗಾರು ಪೂರ್ಣಗೊಂಡಿದ್ದು ಮತ್ತು ಒಟ್ಟು ನಿಯೋಜಿತ ಮೊತ್ತವಾದ ರೂ 20.96 ಕೋಟಿಗಳಲ್ಲಿ ಬಜೆಟ್‌ನಲ್ಲಿ 5.43(25.90% ) ಕೋಟಿ ಬಳಸಲಾಗಿದೆ.

ತುಮಕೂರು (NSG-4) ತುಮಕೂರು ನಿಲ್ದಾಣ ಅತ್ಯಂತ ಮಹತ್ವದ ಪ್ರಗತಿಯನ್ನು ಕಂಡಿದ್ದು ಶೇ 45 ರಷ್ಟು ಕಾಮಗಾರಿ ಪೂರ್ಣಗೊಂಡಿದೆ, ಒಟ್ಟು ರೂ 24.18 ಕೋಟಿ ಮೊತ್ತದಲ್ಲಿ ರೂ 5.87 (ಶೇ 24.27) ವ್ಯಯಿಸಲಾಗಿದೆ.

ವೈಟ್‌ಫೀಲ್ಡ್ (NSG-4), ರೂ 23.37 ಕೋಟಿಗಳ ಒಟ್ಟು ಯೋಜನಾ ವೆಚ್ಚದೊಂದಿಗೆ ಅಭಿವೃದ್ಧಿ ಕಾಣುತ್ತಿರುವ ವೈಟ್‌ಫೀಲ್ಡ್ ನಿಲ್ದಾಣದಲ್ಲಿ, ರೂ 6.00 ಕೋಟಿ ಖರ್ಚಿನಲ್ಲಿ ಶೇ 33 ರಷ್ಟು ಕಾಮಗಾರಿ ನೆರವೇರಿಸಲಾಗಿದೆ.

ಈ ಅಭಿವೃದ್ದಿ ಕಾಮಗಾರಿಗಳಲ್ಲಿ ಮೇಲಿನ ನಿಲ್ದಾಣಗಳಲ್ಲಿ ನಿಲ್ದಾಣದ ಕಟ್ಟಡಗಳು, ವರ್ಧಿತ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು, ಉತ್ತಮ ಪಾರ್ಕಿಂಗ್ ಸೌಲಭ್ಯಗಳು ಮುಂತಾದ ವಿವಿಧ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇವು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಮತ್ತು ಆಧುನಿಕ ಪ್ರಯಾಣದ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net