ಸಾಮಾಜಿಕ ಕಾರ್ಯಗಳಿಂದ ಪ್ರಗತಿ ಸಾಧ್ಯ

klr skdpr
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿಸತಿ ಹಾಗೂ ಜನಜಾಗೃತಿ ಜಾಥಾ ಕಾಯಕ್ರಮವನ್ನು ಶ್ರೀಮದ್​ ನಾಗಲಾಪುರ ವೀರ ಸಿಂಹಾಸನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ವಾಸುದೇವ, ಸಿಎಂಆರ್​ ಶ್ರೀನಾಥ್​, ಅರುಣಮ್ಮ, ಬಾಬು, ಸುರೇಶ್​ ಇದ್ದರು.
Published on

ಕೋಲಾರ: ಸಾಮಾಜಿಕ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಗಳಿಂದ ಸಮಾಜದ ಪ್ರಗತಿ ಸಾಧ್ಯ. ಇದಕ್ಕೆ ಸಮುದಾಯದ ಸಹಭಾಗಿತ್ವ ಮುಖ್ಯ ಎಂದು ಶ್ರೀಮದ್​ ನಾಗಲಾಪುರ ವೀರ ಸಿಂಹಾಸನ ಮಠದ ಪೀಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಗೃತಿ ವೇದಿಕೆ ಹಾಗೂ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿಸತಿ ಹಾಗೂ ಜನಜಾಗೃತಿ ಜಾಥಾ ಕಾಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಡಾ.ಬಿ.ಆರ್​.ಅಂಬೇಡ್ಕರ್​, ಬಸವ, ಗಾಂಧಿ, ವಾಲ್ಮೀಕಿ, ಕನಕದಾಸರಂತ ಆದರ್ಶ ಪುರಷರ ಜಯಂತಿಗಳನ್ನು ಸರ್ಕಾರ ಆಚರಿಸಿಕೊಂಡು ಬರುತ್ತಿದೆ. ಇದರ ಜತೆಗೆ ಅವರ ತತ್ವ ಆದರ್ಶಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಜತೆಗೆ ಧರ್ಮಸ್ಥಳ ಯೋಜನಾ ಸಂಸ್ಥೆಯು ಸಮಾಜದ ಸುಧಾರಣೆ, ಅಭಿವೃದ್ಧಿಗಳ ದೆಸೆಯಲ್ಲಿ ಸ್ವಸ್ಥ ಸಮಾಜ ನಿಮಾರ್ಣ ಮಾಡಲು ಹೆಜ್ಜೆ ಇಟ್ಟಿದೆ. ಶ್ರೀ ಕ್ಷೇತ್ರ ನಿರ್ವಹಿಸದ ಸಮಾಜ ಸೇವೆ ಮತ್ತೊಂದಿಲ್ಲ ಎಂಬಂತೆ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ ಎಂದು ಶ್ರೀಗಳು ಶ್ಲಾಘಿಸಿದರು.
ಎಗ್ಗಿಲ್ಲದೆ ಮದ್ಯದ ಅಂಗಡಿಗಳಿಗೆ ಸರ್ಕಾರವು ಪರವಾನಗಿ ನೀಡುತ್ತಿರುವುದರಿಂದ ಸಮಾಜದಲ್ಲಿ ವ್ಯಸನಿಗಳು ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಕೆಲ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಜತೆಗೆ ಬಡತನವೂ ಹೆಚ್ಚಾಗುತ್ತಿದೆ. ಸರ್ಕಾರಕ್ಕೆ ಆದಾಯ ಮುಖ್ಯ ಹೊರತು ಬಡವರು ಬೀದಿಪಾಲಾಗುತ್ತಿರುವುದರ ಬಗ್ಗೆ ಗಮನ ಇಲ್ಲದಂತಾಗಿದೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಮಕ್ಕಳ ಮೇಲೆ ನಿಗಾ ಇರಲಿ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್​ ಎಸ್​.ಹೊಸಮನಿ ಮಾತನಾಡಿ, ಜಿಲ್ಲೆಯನ್ನು ಮದ್ಯಪಾನದಿಂದ ಮುಕ್ತಗೊಳಿಸಲು ಶ್ರೀ ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಂದ ಬೇರು ಮಟ್ಟದಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸಂಸ್ಥೆ ಜತೆಗೆ ಸಮುದಾಯವೂ ಕೈ ಜೋಡಿಸಬೇಕು. ಮಹಾತ್ಮ ಗಾಂಧೀಜಿ ಅವರ ಕನಸು ನನಸು ಮಾಡುವಂತ ಕಾರ್ಯಕ್ರಮಗಳು ಕಾರ್ಯಗತಗೊಳ್ಳಬೇಕು. ಮಾನವ ಜೀವನದಲ್ಲಿ ಒಳ್ಳೆಯ ಗುರಿಗಳನ್ನು ಹೊಂದಿರಬೇಕು. ದುಷ್ಚಟಗಳಿಂದ ದೂರವಿರಬೇಕು, ಇದಕ್ಕೆ ಪೂರಕವಾಗಿ ಪಾಲಕರು ಮಕ್ಕಳ ಕಡೆ ಗಮನ ಹರಿಸಿ, ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟವು ಕಾನೂನು ಬಾಹಿರ. ಎನ್​.ಡಿ.ಪಿ.ಎಸ್​ ಕಾಯಿದೆ ಅನ್ವಯ ಇದು ಅಪರಾಧವಾಗಿದ್ದು, ಇದಕ್ಕೆ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಕೇವಲ ಅಪರಾಧ ಮಾತ್ರವಲ್ಲ ಅರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಮಕ್ಕಳಿಗೆ ಶೈಕ್ಷಣದ ಜತೆಗೆ ಸಂಸ್ಕಾರ, ಸಂಸತಿ ಕಲಿಸಬೇಕು. ಬಾಲ್ಯವಿವಾಹಗಳು, ಅಪ್ರಾಪ್ತರು ಗರ್ಭಧರಿಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿರುವುದು, ಬ್ರೂಣ ಹತ್ಯೆಯಂತಹ ಟನೆಗಳು ಮೊಬೈಲ್​ಗೀಳು, ಮಾದಕ ವಸ್ತುಗಳ ಸೇವನೆಯಿಂದ ಅಪರಾಧಗಳು ಹೆಚ್ಚಾಗಿ ಯುವಕರು ಜೈಲು ಪಾಲಾಗುತ್ತಿರುವುದು ವಿಷಾದಕರ ಸಂಗತಿ ಎಂದು ಸುನೀಲ್​ ಎಸ್​.ಹೊಸಮನಿ ಕಳವಳ ವ್ಯಕ್ತಪಡಿಸಿದರು.

ನಿಸ್ವಾರ್ಥ ಸೇವೆಯಿಂದ ಮನಸ್ಸಿಗೆ ನೆಮ್ಮದಿ
ಸಮಾಜ ಸೇವಕ ಶ್ರೀನಾಥ್​ ಮಾತನಾಡಿ, ಸಮಾಜವನ್ನು ಸುಧಾರಣೆ, ಅಭಿವೃದ್ಧಿಗಾಗಿ ಆಯೋಜಿಸುತ್ತಿರುವಂತ ಕಾರ್ಯಕ್ರಮ ನೈತಿಕತೆಯಿಂದ ಕೊಡಿದೆ. ಧರ್ಮಸ್ಥಳ ಧಮಾರ್ಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗಡೆ ಅವರ ಚಿಂತನೆ, ಕನಸುಗಳನ್ನು ನನಸು ಮಾಡಲು ಸಂಸ್ಥೆ ಕಾರ್ಯಕ್ರಮಗಳು ಪ್ರತಿಮನೆ, ಮನೆಗೂ ತಲುಪುವಂತಾಗಬೇಕು.
ನಿಸ್ವಾರ್ಥ ಸೇವೆ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವುದು ಅರ್ಥಪೂರ್ಣ. ಸಮಾಜ ಸೇವೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ, ಜನಜಾಗೃತಿ ಅಧ್ಯಕ್ಷ ಎಂ.ಕೆ.ವಾಸು ದೇವ, ಸದಸ್ಯ ಹೊಳಲಿ ಪ್ರಕಾಶ್​, ಸ್ಕೌಟ್ಸ್​ ಆಯುಕ್ತ ಕೆ.ಆರ್​.ಸುರೇಶ್​, ಅರುಣಮ್ಮ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಿ.ಎಚ್​.ಪೆದ್ದಯ್ಯ, ತಾಲೂಕು ಯೋಜನಾಧಿಕಾರಿ ಸಿದ್ಧಗಂಗಯ್ಯ, ಜನ ಜಾಗೃತಿ ಜಿಲ್ಲಾ ಉಪಾಧ್ಯಕ್ಷ ಟಮಕ ವೆಂಕಟೇಶ್​, ನಂಜುಂಡಯ್ಯ, ಕೆ.ರಾಜೇಶ್​ ಸಿಂಗ್​, ಕಾರ್ಯದರ್ಶಿ ತಿಮ್ಮಯ್ಯ ನಾಯಕ್​, ಸ್ಕೌಟ್​ ಬಾಬು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net