ಶಿಕ್ಷಣ ಸಂಸ್ಥೆಗಳ ಪ್ರಗತಿ ಮೌಲ್ಯಮಾಪನ ಮುಖ್ಯ

15.npk-3
ಕೊಟ್ಟಮುಡಿಯ ಮರ್ಕಜುಲ್ ಶಾಲೆಯಲ್ಲಿ ಮರ್ಕಜುಲ್ ಹಿದಾಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ವತಿಯಿಂದ ಗೈಡಿಂಗ್ ಗ್ರೇಸ್ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರ್ಜೂಕ್ ಸಹದಿ, ಇಸ್ಮಾಯಿಲ್ ಸಾಖಾಫಿ, ಮಹಮ್ಮದ್ ಹಾಜಿ ಕುಂಜಿಲ ಪಾಲ್ಗೊಂಡಿದ್ದರು.
Published on

ನಾಪೋಕ್ಲು: ಶಾಲಾ ಪರಿಸರ ಹಾಗೂ ವಿದ್ಯಾರ್ಥಿಗಳ ಸಾಧನೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದು ಬಹುಮುಖ್ಯವಾಗಿದೆ ಎಂದು ಮರ್ಕಜುಲ್ ಗ್ಲೋಬಲ್ ಕೌನ್ಸಿಲ್‌ನ ಸಹಾಯಕ ನಿರ್ದೇಶಕ ಮರ್ಜೂಕ್ ಸಹದಿ ಹೇಳಿದರು.

ಇಲ್ಲಿಗೆ ಸಮೀಪದ ಕೊಟ್ಟಮುಡಿಯ ಮರ್ಕಜುಲ್ ಶಾಲೆಯಲ್ಲಿ ಮರ್ಕಜುಲ್ ಹಿದಾಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ವತಿಯಿಂದ ಗೈಡಿಂಗ್ ಗ್ರೇಸ್ ಎಂಬ ಶೀರ್ಷಿಕೆಯಲ್ಲಿ ನಡೆದ ಪಾಲಕರ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಶಿಸ್ತು ಎಂಬ ವಿಷಯದ ಕುರಿತು ಅವರು ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರವೂ ಕೂಡ ಪ್ರಮುಖವಾದುದಾಗಿದೆ. ಮಕ್ಕಳ ಮಾನವ ವೈಜ್ಞಾನಿಕ ಬೆಳವಣಿಗೆಗೆ ಪಾಲಕರು ಹಾಗೂ ಶಿಕ್ಷಕರು ಸಮಾನ ಪಾತ್ರ ವಹಿಸಬೇಕು.

ಶೈಕ್ಷಣಿಕ ನಿರ್ದೇಶಕ ಅಬ್ದುಲ್ ಖಾದರ್ ಮಾತನಾಡಿ, ನವೀನ ತಂತ್ರಜ್ಞಾನ ಮೂಲಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಪಾಲಕರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಾಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾರ್ಕಸ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಮಹಮ್ಮದ್ ಹಾಜಿ ಕುಂಜಿಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅಹಮದ್ ಹಾಜಿ, ಹಮೀದ್ ಹಾಜಿ, ಮೊಯಿ ದಿನ್ ಕುಟ್ಟಿ ಹಾಜಿ ಕೊಳಕೇರಿ, ಅಬ್ದು ಹಾಜಿ, ಯೂಸುಫ್ ಹಾಜಿ , ಹುಸೇನ್ ನೂರಾನಿ, ಅಶ್ರಫ್ ಸಖಾಫಿ ಹಾಗೂ ಮರ್ಕಜುಲ್ ಹಿದಾಯ ಅಧೀನದಲ್ಲಿರುವ ವಿವಿಧ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net