ಚೆಕ್​ಬೌನ್ಸ್ ಪ್ರಕರಣ: ಟಾಲಿವುಡ್ ನಿರ್ಮಾಪಕ ಬಂಡ್ಲಗಣೇಶ್​ಗೆ ಒಂದು ವರ್ಷ ಜೈಲು ಶಿಕ್ಷೆ!

ಬಂಡ್ಲ
Published on

ಹೈದರಾಬಾದ್​: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು ಆಕಾಂಕ್ಷಿಯಾಗಿದ್ದ ತೆಲುಗು ಚಿತ್ರರಂಗದ ನಟ, ಸಿನಿಮಾ ನಿರ್ಮಾಪಕ ಬಂಡ್ಲ ಗಣೇಶ್​ ಅವರಿಗೆ ವಂಚನೆ ಪ್ರಕರಣವೊಂದರಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಹಣ ಪಾವತಿಗೆ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಓಂಗೋಲು ಎರಡನೇ ಹೆಚ್ಚುವರಿ ಮುನ್ಸಿಫ್ ಮ್ಯಾಜಿಸ್ಟ್ರೇಟ್ ಪಿ.ಭಾನುಸಾಯಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಹಣ ಪಾವತಿಗೆ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಹಾಗೂ 95 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ನಿರ್ಮಾಪಕ ಬಂಡ್ಲಗಣೇಶ್ ಅವರು ಜೆಟ್ಟಿ ವೆಂಕಟೇಶ್ವರಲು ಎಂಬುವವರಿಗೆ 95 ಲಕ್ಷ ರೂ.ಗಳನ್ನು ಪಾವತಿಸಬೇಕಾಗಿದ್ದು, ನಗದು ಹಣವನ್ನು ಚೆಕ್ ರೂಪದಲ್ಲಿ ನೀಡಿದ್ದಾರೆ. ವೆಂಕಟೇಶ್ವರಲು ಚೆಕ್ ಅನ್ನು ನಗದೀಕರಿಸಲು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದು, ಖಾತೆಗಳಲ್ಲಿ ಹಣ ಕೊರತೆಯಿಂದ ಹಲವು ಭಾರಿ ಚೆಕ್​ ಬೌನ್ಸ್ ಆಗಿದೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ತನಿಖೆ ನಡೆಸಿದ ಮ್ಯಾಜಿಸ್ಟ್ರೇಟ್ ಆರೋಪಿಗೆ ಶಿಕ್ಷೆ ವಿಧಿಸಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 95.10 ಲಕ್ಷ ರೂ. ದಂಡದ ರೂ.95 ಲಕ್ಷವನ್ನು ವೆಂಕಟೇಶ್ವರಲು ಎಂಬುವರಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ತೀರ್ಪು ನೀಡಿದೆ.  ಈ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಒಂದು ತಿಂಗಳ ಕಾಲಾವಕಾಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net