ವಿದ್ಯಾರ್ಥಿಗಳಿಗೆ ಆಲಸ್ಯವೇ ದೊಡ್ಡ ಶತ್ರು

anr beo
ಶಿವಮೊಗ್ಗ ತಾಲೂಕಿನ ಆಯನೂರು ದ್ಯಾವಿನಕೆರೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಬಿಇಒ ರಮೇಶ್ ಮಾತನಾಡಿದರು.
Published on

ಆಯನೂರು: ವಿದ್ಯಾರ್ಥಿಗಳಿಗೆ ಸೋಮಾರಿತನವೇ ದೊಡ್ಡ ಶತ್ರು. ಹಾಗಾಗಿ ಎಲ್ಲರಿಗೂ ಕಲಿಯುವ ಇಚ್ಛೆ ಇರಬೇಕು ಎಂದು ಶಿವಮೊಗ್ಗ ತಾಲೂಕು ಬಿಇಒ ರಮೇಶ್ ಹೇಳಿದರು.

ಮಂಗಳವಾರ ದ್ಯಾವಿನಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಂಡಘಟ್ಟ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಮಟ್ಟದ ಕನಸು ಕಾಣಬೇಕು. ಅದಕ್ಕೆ ಶ್ರಮ ಪಡಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ನಯ, ವಿನಯ ಇರಬೇಕು. ಆಗ ನಿಮ್ಮ ಭವಿಷ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳೆಲ್ಲರೂ ಬುದ್ಧಿವಂತರು. ಯಾರೂ ದಡ್ಡರಲ್ಲ. ಆಲಸ್ಯವೇ ದಡ್ಡತನಕ್ಕೆ ದಾರಿ. ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳ ವ್ಯಾಸಂಗದ ಹಿತದೃಷ್ಟಿಯಿಂದ ಮನೆಯಲ್ಲಿ ಟಿವಿ, ಮೊಬೈಲ್ ಆಫ್ ಮಾಡಿ ಮಕ್ಕಳ ಭವಿಷ್ಯ ಉಜ್ವಲವಾಗಿ ಮಾಡಿ ಎಂದು ತಿಳಿಸಿದರು. ಮಕ್ಕಳು ವ್ಯಾಸಂಗ ಮಾಡುವಾಗ ಅವರ ಜತೆಯಲ್ಲೇ ಕುಳಿತುಕೊಳ್ಳಿ ಎಂದು ಸಲಹೆ ನೀಡಿದರು.

ಇಸಿ ಒ.ಶಶಿರೇಖಾ, ಸೈಯದ್ ಮುಸ್ತಫಾ, ಮಂಡಘಟ್ಟ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಮಂಜುನಾಥ್, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net