ಹರಕೆ ವಸ್ತುಗಳ ಹರಾಜಿನಿಂದ ಆದಾಯ

chandragutti (1)
ಸೊರಬ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ವಸ್ತುಗಳನ್ನು ಕಲ್ಯಾಣ ಮಂಟಪದ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಯಿತು.
Published on

ಸೊರಬ: ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ದೇವಸ್ಥಾನದ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಬಹಿರಂಗ ಹರಾಜು ನಡೆಸಲಾಯಿತು. ಹರಕೆ ವಸ್ತುಗಳ ಹರಾಜಿನಿಂದ ಒಟ್ಟು 9.33 ಲಕ್ಷ ರೂ. ಆದಾಯ ದೇವಾಲಯಕ್ಕೆ ಸಂಗ್ರಹವಾಗಿದೆ.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾಕುಮಾರಿ ಸಮ್ಮುಖದಲ್ಲಿ ಭಕ್ತರಿಂದ ಹರಕೆ ರೂಪದಲ್ಲಿ ದೇಗುಲಕ್ಕೆ ಬಂದಂತಹ ಮೈದಾಹಿಟ್ಟು, ಬೇಳೆ, ಭತ್ತ, ಕಲ್ಲು ಸಕ್ಕರೆ, ರವೆ, ಒಣ ಕೊಬ್ಬರಿ, ಬೆಲ್ಲ, ಸಕ್ಕರೆ, ತೆಂಗಿನಕಾಯಿ, ಅಡುಗೆ ಎಣ್ಣೆ, ದೀಪದ ಎಣ್ಣೆ, ಅಕ್ಕಿ ಪ್ಯಾಕೆಟ್, ಅಕ್ಕಿ ಮತ್ತಿತರ ವಸ್ತುಗಳನ್ನು ಹರಾಜು ಹಾಕಲಾಯಿತು.
ಪರಶುರಾಮ್ ಬೋವಿ, ಸದಾನಂದ ಕಾಮತ್, ವೇಣುಗೋಪಾಲ್ ಶೆಣೈ, ಗಣೇಶ್ ಮರಡಿ, ಲಕ್ಷ್ಮಣಪ್ಪ, ಅಲ್ಲಮಪ್ರಭು, ಕೆ.ಎಚ್.ರಾಜು, ಪುಟ್ಟಪ್ಪ, ಕೃಷ್ಣ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net