ಹೊರ ಠಾಣೆಯಿಂದ ಸಮಸ್ಯೆಗಳ ಇತ್ಯರ್ಥ ಶೀಘ್ರ

madhu (3)
ಚಂದ್ರಗುತ್ತಿಯಲ್ಲಿ ಪೊಲೀಸ್ ಹೊರ ಠಾಣೆ ಕಟ್ಟಡ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ ನೆರವೇರಿಸಿದರು. ಅನಿಲ್‌ಕುಮಾರ್ ಭೂಮರಡ್ಡಿ, ಕೆ.ಇ.ಕೇಶವ್, ಪ್ರಶಾಂತ್‌ಕುಮಾರ್, ಶಶಿಧರ್ ಇತರರಿದ್ದರು.
Published on

ಸೊರಬ: ಚಂದ್ರಗುತ್ತಿ ರೇಣುಕಾಂಬೆ ಕ್ಷೇತ್ರಕ್ಕೆ ರಾಜ್ಯದ ಹಲವೆಡೆಯಿಂದ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಠಾಣೆ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಚಂದ್ರಗುತ್ತಿಯಲ್ಲಿ ಪೊಲೀಸ್ ಹೊರ ಠಾಣೆ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೇಣುಕಾಂಬೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಈಗಾಗಲೇ ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಕಟ್ಟಡ ನಿರ್ಮಾಣದಿಂದ ಚಂದ್ರಗುತ್ತಿ ಭಾಗದಲ್ಲಿ ಜನರು ಯಾವುದೇ ದೂರುಗಳನ್ನು ಇಲ್ಲಿಯೇ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ. ಕಟ್ಟಡ ಸುಸಜ್ಜಿತ ಹಾಗೂ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಕೆ.ಇ.ಕೇಶವ್, ಪ್ರಶಾಂತ್‌ಕುಮಾರ್, ಇಒ ಶಶಿಧರ್, ಪಿಆರ್‌ಇಡಿ ಇಂಜಿನಿಯರ್ ನಾಗರಾಜ್ ಅನ್ವೇಕರ್, ಪಿಎಸ್‌ಐ ನಾಗರಾಜ್, ಚಂದನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಗ್ರಾಪಂ ಉಪಾಧ್ಯಕ್ಷ ರೇಣುಕಪ್ರಸಾದ್, ಪ್ರಮುಖರಾದ ಗಣಪತಿ ಹುಲ್ತಿಕೊಪ್ಪ, ತಬಲಿ ಬಂಗಾರಪ್ಪ, ಸುರೇಶ್ ಹಾವಣ್ಣನವರ್, ಎಂ.ಡಿ.ಶೇಖರ್, ಸುಧಾಕರ್, ರಾಮಪ್ಪ, ಜಯಶೀಲ ಗೌಡ, ರತ್ನಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net