ಹೋಟೆಲ್​ ಹೊರಗೆ ಪ್ಯಾಲೇಸ್ತೀನ್ ಪರ ಪೋಸ್ಟರ್ ಅಂಟಿಸಿದ 6 ಮಂದಿ ಅರೆಸ್ಟ್​!

ವಿಜಯವಾಣಿ - 2024-01-08T113323.535
Published on

ಕೇರಳ: ನಗರದ ಸ್ಟಾರ್‌ಬಕ್ಸ್ ಹೋಟೆಲ್ ಹೊರಗೆ ಪ್ಯಾಲೇಸ್ತೀನ್ ಪರ ಪೋಸ್ಟರ್‌ಗಳನ್ನು ಅಂಟಿಸಿದ ಆರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿದೆ.

ಜನವರಿ 4ರಂದು ಕೋಝಿಕ್ಕೋಡ್‌ನ ಫಾರೂಕ್ ಕಾಲೇಜಿನ ವಿದ್ಯಾರ್ಥಿಗಳು ಸ್ಟಾರ್‌ಬಕ್ಸ್ ಔಟ್‌ಲೆಟ್‌ ಹೊರಗೆ ಫ್ರೀ ಪ್ಯಾಲೇಸ್ತೀನ್ ಎಂದು ಬರೆದ ಕೆಲವು ಪೋಸ್ಟರ್​ಗಳನ್ನು ಅಂಟಿಸಿದ ಘಟನೆ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಅಪಾದಿತ ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು, ಕೆಲ ಸಮಯ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಹೋಟೆಲ್​ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 427, 448, 153 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸ್ಟೂಡೆಂಟ್ಸ್​ ವಿಭಾಗವಾದ ಫ್ರೆಟರ್ನಿಟಿ ಮೂವ್‌ಮೆಂಟ್‌ನ ಸದಸ್ಯರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net