ಕಾಮನ್ವೆಲ್ತ್​ ಗೇಮ್ಸ್​ ಪದಕ ಸಾಧಕಿ ಶಿಲ್ಪಾಗೆ 20 ಲಕ್ಷ ರೂ. ಬಹುಮಾನ

ಕಾಮನ್ವೆಲ್ತ್​ ಗೇಮ್ಸ್​ ಪದಕ ಸಾಧಕಿ ಶಿಲ್ಪಾಗೆ 20 ಲಕ್ಷ ರೂ. ಬಹುಮಾನ
ಕಾಮನ್ವೆಲ್ತ್​ ಗೇಮ್ಸ್​ ಪದಕ ಸಾಧಕಿ ಶಿಲ್ಪಾಗೆ 20 ಲಕ್ಷ ರೂ. ಬಹುಮಾನ
Published on

ಬೆಂಗಳೂರು: ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ (

commonwealth games 2026

) ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಕ್ರೀಡಾಪಟು ಕೆ.ಎಸ್​. ಶಿಲ್ಪಾ ಅವರನ್ನು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸನ್ಮಾನಿಸಿ, ಅಭಿನಂದಿಸಿದರು. ಈ ವೇಳೆ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ 20 ಲಕ್ಷ ರೂ. ನಗದು ಬಹುಮಾನದ ಚೆಕ್​ ವಿತರಿಸಲಾಯಿತು. ಅವರಿಗೆ ಈಗಾಗಲೆ ಗ್ರೂಪ್​ ಬಿ ಸರ್ಕಾರಿ ನೌಕರಿ ಘೋಷಿಸಲಾಗಿದೆ.


"ಶಿಲ್ಪಾ ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಮತ್ತು ಅವರ ಮುಂದಿನ ಗುರಿಗಳಿಗೆ ಇನ್ನಷ್ಟು ಯಶಸ್ಸು ಸಿಗಲಿ' ಎಂದು ಮುಖ್ಯಮಂತ್ರಿ ಹಾರೈಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ಮತ್ತು ಕರ್ನಾಟಕ ಒಲಿಂಪಿಕ್​ ಸಂಸ್ಥೆ ಅಧ್ಯಕ್ಷ ಡಾ. ಕೆ. ಗೋವಿಂದರಾಜ್​ ಮತ್ತು ಶಾಸಕ ರವಿಶಂಕರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net