ಬೇರೆ ರಾಜ್ಯದ ಸಾಧನೆ ಹೇಳಿ ಕರ್ನಾಟಕದ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ ಪ್ರಿಯಾಂಕಾ ಗಾಂಧಿ

Priyanka Gandhi
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಪರ ಪ್ರಚಾರಕ್ಕೆ ಇಳಿದಿರುವ ಪ್ರಿಯಾಂಕಾ ಗಾಂಧಿ, ಇತರೆ ಕಾಂಗ್ರೆಸ್​ ಆಡಳಿತ ಇರುವ ರಾಜ್ಯಗಳ ಉದಾಹರಣೆ ನೀಡಿ ರಾಜ್ಯದ ಜನರನ್ನು ಸೆಳೆಯಲು ಪ್ರಯತ್ನ ಮಾಡಿದರು.

ತಮ್ಮ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ "ನಿಮ್ಮ ಕಬ್ಬಿಗೆ ಸೂಕ್ತ ಬೆಲೆ ಸಿಗಲ್ಲ. ಬಿಜೆಪಿಯವರು ಲೂಟಿ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಅವರು ಮಲಗಿದ್ದಾರೆ. ನಾವು ಮಧ್ಯಪ್ರದೇಶ ರಾಜಸ್ಥಾನದ ರೈತರ ಸಾಲ ಮನ್ನಾ ಮಾಡಿದ್ದೇವೆ" ಎಂದು ಹೇಳಿದ್ದು ಈ ಮೂಲಕ ತಮ್ಮ ಯೋಜನೆಗಳ ಬಗ್ಗೆ ಜನರಿಗೆ ಹೇಳಿದ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಈ ಸಂದರ್ಭ ಅಭಿವೃದ್ಧಿಯ ಗ್ಯಾರಂಟಿ ನೀಡಿದ ಪ್ರಿಯಾಂಕಾ ಗಾಂಧಿ, 2.5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ 200 ಯೂನಿಟ್ ಕರೆಂಟ್ ಉಚಿತ ಮಾಡುವುದು, 10 ಕೆಜಿ ಅಕ್ಕಿ, ಪದವೀಧರರಿಗೆ 3 ಸಾವಿರ ರೂ. ಹಣ, ಡಿಪ್ಲೊಮಾದವರಿಗೆ 1500ರೂ., ಮಹಿಳೆಯರಿಗೆ 2 ಸಾವಿರ ರೂ. ನೀಡಲಾಗುವುದು ಎಂದರು.

"ಗೃಹಿಣಿಯರ ಹೆಚ್ಚಿನ ಹೊರೆ ತಗ್ಗಿಸಿ ನೆಮ್ಮದಿ ನೀಡುತ್ತೇವೆ"

ಇದೇ ವೇಳೆ, "ಗೃಹಿಣಿಯರಿಗೆ ಹೆಚ್ಚಿನ ಹೊರೆ ಇದೆ. ಅವರಿಗೆ ನೆಮ್ಮದಿ‌ ಕೊಡಲು ಮಹಿಳೆಯರಿಗೆ ಯೋಜನೆ ನಮ್ಮಲ್ಲಿದೆ. ನಂದಿನಿಯನ್ನು ನಾವು ಬಲ ಪಡಿಸುತ್ತೇವೆ. ಹೊರಗಡೆಯಿಂದ ಯಾವ ಸಂಸ್ಥೆಗೂ ಬರಲು ಬಿಡುವುದಿಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಬರುತ್ತಾರೆ. ಬಂದು ಚಿತ್ರ ವಿಚಿತ್ರವಾಗಿ ಮಾತನಾಡುತ್ತಾರೆ" ಎಂದಿದ್ದಾರೆ.

ಪ್ರಧಾನಿ ಸಮಾಧಿ ತೋಡುತ್ತಿರುವ ವಿಚಾರವಾಗಿ ಮಾತನಾಡಿದ ಪ್ರಿಯಾಂಕಾ ಗಾಂಧಿ, "ಈ ದೇಶದಲ್ಲಿ ಯಾರು ಆ ರೀತಿ ಬಯಸುವುದಿಲ್ಲ. ಅವರ ಆರೋಗ್ಯ ಚೆನ್ನಾಗಿರಲಿ ಅಂತಾ ಬಯಸುತ್ತಾರೆ. ಇದು ಒಂದು ಚುನಾವಣಾ ವಿಚಾರನಾ? ಬೇರೆ ವಿಚಾರ ಪ್ರಧಾನಿ ಮಾತನಾಡುತ್ತಾರೆ. ನಿರುದ್ಯೋಗ ಬೆಲೆ ಏರಿಕೆ ಬಗ್ಗೆ ಏಕೆ ಮಾತನಾಡಲ್ಲ? ಈ ಚುನಾವಣೆ ಮೋದಿ ಬಗ್ಗೆ ಅಲ್ಲ. ಇದು ಯಾರ ರಾಜಕಾರಣಿಯ ಬಗ್ಗೆಯೂ ಅಲ್ಲ.

ಇದು ಚುನಾವಣೆ ಕರ್ನಾಟಕದ ಬಗ್ಗೆ ನಿಮ್ಮ ಅಭಿಮಾನದ ವಿಚಾರ. ಇವರು ಲೂಟಿ ಮಾಡಿ ನಿಮ್ಮ ಜೀವನ ಹಾಳು ಮಾಡಿದ್ದಾರೆ ಆ ಬಗ್ಗೆ ಚುನಾವಣೆ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದನ್ನು ನಿಮ್ಮ ಮಕ್ಕಳ ಭವಿಷ್ಯದ ಸಂಸ್ಕೃತಿ ರಕ್ಷಿಸುವ ಚುನಾವಣೆ. ಇದು ನಿಮಗೆ ಗೊತ್ತಾಗಲಿಲ್ಲ ಅಂದರೆ ಅದು ದುರಂತ. ಲೂಟಿ ಮಾಡುವ ಸರ್ಕಾರ ತೆಗೆದು ಹಾಕಿ, ನಿಮ್ಮ ಹಿತಕ್ಕೆ ಕೆಲಸ ಮಾಡುವ ಸರ್ಕಾರ ತನ್ನಿ" ಎಂದು ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net