

ನವದೆಹಲಿ: ಪ್ಯಾಲೆಸ್ತೀನ್(Palestine) ಎಂದು ಬರೆದಿರುವ ಬ್ಯಾಗನ್ನು ಸೋಮವಾರ(ಡಿ.16) ಸಂಸತ್ತಿಗೆ ತಂದಿದ್ದಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡು ಲೋಕಸಭಾ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು.
ಅಲ್ಲದೆ, ಪ್ಯಾಲೆಸ್ತೀನ್ ಎಂದು ಬರೆದ ಬ್ಯಾಗ್‌ನೊಂದಿಗೆ ಸೋಮವಾರ ಸಂಸತ್ತಿಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಬಾಂಗ್ಲಾದೇಶಿ ಹಿಂದೂಗಳ ನೋವು ಪ್ರಿಯಾಂಕಾ ಅವರಿಗೆ ಕಾಣುತ್ತಿಲ್ಲ ಎಂದು ಹೇಳಿತ್ತು. ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಪ್ರಿಯಾಂಕಗಾಂಧಿ ಕುರಿತು ಹೊಗಳಿದ್ದಾರೆ.
ಪಾಕಿಸ್ತಾನದ ಇಮ್ರಾನ್ ಸರ್ಕಾರದ ಮಾಜಿ ಸಚಿವ ಚೌದರಿ ಫವಾದ್ ಹುಸೇನ್ ತಮ್ಮ ಎಕ್ಸ್ ಖಾತೆಯಲ್ಲಿ ಸಂಸದೆ ಪ್ರಿಯಾಂಕ ಗಾಂಧಿ ಕುರಿತು ಬರೆದುಕೊಂಡಿದ್ದಾರೆ.
''ಜವಾಹರಲಾಲ್ ನೆಹರೂ ಅವರಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಪ್ರಿಯಾಂಕಾ ಗಾಂಧಿ ಹಂದಿಮರಿಗಳ ನಡುವೆ ಎತ್ತರವಾಗಿ ನಿಂತಿದ್ದಾರೆ, ಇದುವರೆಗೂ ಪಾಕಿಸ್ತಾನದ ಸಂಸತ್ತಿನ ಯಾವ ಸದಸ್ಯರೂ ಅಂತಹ ಧೈರ್ಯವನ್ನು ಪ್ರದರ್ಶಿಸಿಲ್ಲ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.
ಇದೀಗ ಇಂದು (ಡಿಸೆಂಬರ್ 17) ಪ್ರಿಯಾಂಕಾ ಗಾಂಧಿ ಬಾಂಗ್ಲಾದೇಶಿ ಹಿಂದೂಗಳಿಗೆ ಬೆಂಬಲವನ್ನು ಸೂಚಿಸಲು ಬಾಂಗ್ಲಾದೇಶವನ್ನು ಸೂಚಿಸುವ ಬ್ಯಾಗ ಅನ್ನು ಹೊತ್ತು ಸಂಸತ್ತಿಗೆ ತೆರಳಿದ್ದರು,(ಏಜೆನ್ಸಿಸ್).