

ಕಳೆದ ಕೆಲ ವರ್ಷಗಳಿಂದ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಬಿಜಿಯಾಗಿದ್ದರು. ಇದರಿಂದಾಗಿ ಭಾರತೀಯ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. 2017ರಲ್ಲಿ ತೆರೆಕಂಡಿದ್ದ ‘ಜೈ ಗಂಗಾಜಲ್’ ಅವರು ನಟಿಸಿದ್ದ ಹಿಂದಿಯ ಕೊನೆಯ ಚಿತ್ರ. ಬಳಿಕ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ 9 ವರ್ಷಗಳ ಬಳಿಕ ಪ್ರಿಯಾಂಕಾ, ನಟ ಮಹೇಶ್ ಬಾಬು ಹಾಗೂ ಎಸ್.ಎಸ್.ರಾಜಮೌಳಿ ಕಾಂಬಿನೇಷನ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಇದರ ಬಳಿಕ ಹೃತಿಕ್ ರೋಷನ್ ನಟಿಸಿ, ನಿರ್ದೇಶಿಸಿರುವ ‘ಕ್ರಿಷ್-4’ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಬಾಲಿವುಡ್‌ಗೂ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಪ್ರಿಯಾಂಕಾ ಮತ್ತೊಂದು ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ಪ್ರಿಯಾಂಕಾ ವಿಶೇಷ ಸಾಂಗ್ ನೃತ್ಯ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಪ್ರಿಯಾಂಕಾ ಎರಡು ದಿನಗಳ ಹಿಂದೆ, ‘ರಾಮ್‌ಲೀಲಾ’ ಚಿತ್ರದ ‘ರಾಮ್ ಚಾಯೇ ಲೀಲಾ ಚಾಯೇ’ ಹಾಡನ್ನು ಜಾಲತಾಣದಲ್ಲಿ ಹಂಚಿಕೊಂಡು, ಸಂಜಯ್ ಬನ್ಸಾಲಿ ಕೆಲಸವನ್ನು ಕೊಂಡಾಡಿದ್ದರು. ಅಲ್ಲದೆ ಕೊನೆಗೆ ಇಂತಹ ಕ್ಷಣ ಮತ್ತೆ ಮರುಕಳಿಸುತ್ತಿದೆ ಎಂದು ಗುಟ್ಟುಬಿಟ್ಟುಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಪ್ರಿಯಾಂಕಾ, ಸಂಜಯ್ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದ ವಿಶೇಷ ಸಾಂಗ್‌ಗೆ ಡಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಇನ್ನು ಅಧಿಕೃತವಾಗಬೇಕಷ್ಟೇ. ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿರುವ ‘ಲವ್ ಆ್ಯಂಡ್ ವಾರ್’ 2026ರ ಮಾರ್ಚ್ 26ಕ್ಕೆ ರಿಲೀಸ್ ಮಾಡುವುದಾಗಿ ತಂಡ ಘೋಷಿಸಿಕೊಂಡಿದೆ-ಏಜೆನ್ಸೀಸ್