ಹೊಸ ಪೋಸ್ಟ್‌ ಮೂಲಕ ಹ್ಯಾಪಿ ನ್ಯೂಸ್‌ ಕೊಟ್ಟ ಪಿಗ್ಗಿ…!

pmix final
Published on

ಪ್ರಿಯಾಂಕಾ ಚೋಪ್ರಾ ಸದ್ಯ ಬಾಲಿವುಡ್‌ನ ದೂರುವುಳಿದಿದ್ದು, ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಯಾಂಕಾ ಚೋಪ್ರಾ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಕಾದಿದೆ. ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಂದು ಹಾಲಿವುಡ್‌ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲಿದ್ದಾರೆ.

"ದಿ ಬ್ಲಫ್" ಎಂಬ ಹಾಲಿವುಡ್‌ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ ಖಾತೆಯ ಮೂಲಕ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಸೆಟ್‌ನ ಫೋಟೋಗಳನ್ನ ಹಂಚಿಕಂಡ ಪ್ರಿಯಾಂಕಾ ಚೋಪ್ರಾ, ಬ್ಯಾಗ್‌ರೌಂಡ್‌ನಲ್ಲಿ ತಮ್ಮ ಮಗಳಿರುವ ಒಂದು ಕ್ಯೂಟ್‌ ಫೋಟೋವನ್ನೂ ಶೇರ್​​ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಿಯಾಂಕಾ ಚೋಪ್ರಾ ಮಾಡಿರುವ ಪೋಸ್ಟ್‌ಗೆ ಪತಿ ನಿಕ್ ಜೋನಾಸ್ ಕೂಡ ಕಾಮೆಂಟ್‌ ಮಾಡಿದ್ದಾರೆ. "ದಿ ಬ್ಲಫ್" 19 ನೇ ಶತಮಾನದಲ್ಲಿ, ಕೆರಿಬಿಯನ್‌ನಲ್ಲಿ ನಡೆದ ಕಥೆಯನ್ನ ಆಧರಿಸಿದೆ. ಪ್ರಿಯಾಂಕಾ ಚೋಪ್ರಾ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಆಸ್ಟ್ರೇಲಿಯಾದಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನ ಫ್ರಾಂಕ್ ಇ. ಫ್ಲವರ್ಸ್ ನಿರ್ದೇಶಿಸಿದ್ದು, ಅಮೆಜಾನ್ ಎಂಜಿಎಂ ಸ್ಟುಡಿಯೋಸ್, ಎಜಿಬಿಒ ಸ್ಟುಡಿಯೋಸ್ ಮತ್ತು ಸಿನೆಸ್ಟಾರ್ ಪಿಕ್ಚರ್ಸ್ ನಿರ್ಮಿಸುತ್ತಿವೆ.

ಪ್ರಿಯಾಂಕಾ ಚೋಪ್ರಾ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net