

Priyanka Gandhi: ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್(Bhupesh Baghel) ಪುತ್ರ ಚೈತನ್ಯ ಬಘೇಲ್(Chaitanya Baghel)ರನ್ನು ಇಡಿ ಬಂಧಿಸಿದ ಪ್ರಕರಣಕ್ಕೆ ಸಂಬಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಈ ವಿಚಾರವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಂಸದೆ ಪ್ರಿಯಾಂಕಾ ಗಾಂಧಿ,'' ಕಳೆದ 11 ವರ್ಷಗಳಲ್ಲಿ, ಇವು ಜನರ ಧ್ವನಿಯನ್ನು ಹತ್ತಿಕ್ಕುವ ಮತ್ತು ವಿರೋಧ ಪಕ್ಷಗಳನ್ನು ದಮನಿಸುವ ತಂತ್ರ ಎಂದು ದೇಶವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ. ಅದರೆ, ಇಂತಹ ತಂತ್ರಗಳಿಂದ ಸತ್ಯವನ್ನು ನಿಗ್ರಹಿಸುವುದು ಅಥವಾ ವಿರೋಧ ಪಕ್ಷಗಳನ್ನು ಬೆದರಿಸುವುದು ಅಸಾಧ್ಯ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಬಘೇಲ್ ಅವರ ಜತೆ ದೃಢವಾಗಿ ನಿಲ್ಲುತ್ತಾರೆ ಎಂದು ಬರೆದುಕೊಂಡಿದ್ದಾರೆ.''
ಅಲ್ಲದೇ, ಕೇಂದ್ರ ಸರ್ಕಾರವು ಛತ್ತೀಸ್ಗಢದ ಎಲ್ಲಾ ಕಾಡುಗಳನ್ನು ಅದಾನಿ ಗ್ರೂಪ್(Adani Group)ನ ಗೌತಮ್ ಅದಾನಿ(Gautam Adani)ಗೆ ಅರ್ಪಿಸಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಒಂದು ದಿನ ಮುಂಚೆ ಇಡಿಯು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ರ ಪುತ್ರನನ್ನು ಚೈತನ್ಯ ಬಾಘೇಲ್ರನ್ನು ರಾಜ್ಯದಲ್ಲಿ ನಡೆದ ಬಹುಕೋಟಿ ಮದ್ಯ ಹಗರಣದ ತನಿಖೆಗೆ ಸಂಬಂಧಿಸಿದಂತೆ ಬಂಧಿಸಿದ್ದೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್ )