ಸಕ್ಸಸ್​ಗಾಗಿ ಸೈತಾನನ ಆರಾಧನೆ!; ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ

Priyanka
Published on

ಮೂರು ವರ್ಷಗಳ ನಂತರ ಇತ್ತೀಚೆಗಷ್ಟೆ ಭಾರತಕ್ಕೆ ಆಗಮಿಸಿದ್ದ ಪ್ರಿಯಾಂಕಾ ಚೋಪ್ರಾ, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಅವರನ್ನು ವ್ಯಕ್ತಿಯೊಬ್ಬರು, ‘ನಿಮ್ಮ ಹಠಾತ್ ಬೆಳವಣಿಗೆ ಕುರಿತು ಹಲವು ಪಿತೂರಿ ಸಿದ್ಧಾಂತಗಳು ಹಬ್ಬಿವೆ. ನೀವು ಈ ಯಶಸ್ಸಿಗಾಗಿ ದೆವ್ವ, ಭೂತಗಳ ಜತೆ ಒಪ್ಪಂದ ಮಾಡಿಕೊಂಡಿದ್ದೀರಂತೆ? ನೀವು ಸೈತಾನನನ್ನು ಆರಾಧಿಸುತ್ತೀರಂತೆ?’ ಎಂದು ಪ್ರಶ್ನೆ ಹಾಕಿದ್ದಾರೆ.

ಈ ರೀತಿಯ ಪ್ರಶ್ನೆಯನ್ನು ನಿರೀಕ್ಷಿಸದ ಪ್ರಿಯಾಂಕಾ ನಗುತ್ತಲೇ, ‘ಭಯಾನಕವಾದ ಪ್ರಶ್ನೆ... ಭಗವಂತ ಶಿವ ನನ್ನ ಬಗ್ಗೆ ತುಂಬ ಬೇಸರ ಮಾಡಿಕೊಂಡಿರಬಹುದು’ ಎಂದಷ್ಟೇ ಉತ್ತರ ನೀಡಿದ್ದಾರೆ. ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡು, ಬಾಲಿವುಡ್​ನಲ್ಲಿ ಮಿಂಚಿ, ಹಾಲಿವುಡ್​ನಲ್ಲೂ ಬಿಜಿಯಾಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಹಾಲಿವುಡ್ ನಟ 30 ವರ್ಷದ ನಿಕ್ ಜೊನಾಸ್ ಮದುವೆಯಾಗಿ ಅಮೆರಿಕದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ, 40 ವರ್ಷ ವಯಸ್ಸಿನಲ್ಲು ಯಶಸ್ಸಿನ ಉತ್ತುಂಗದಲ್ಲಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ಬಾಡಿಗೆ ತಾಯಿಯ ಮೂಲಕ ಮುದ್ದಾದ ಹೆಣ್ಣು ಮಗು ಪಡೆದಿರುವ ಪ್ರಿಯಾಂಕಾ, ಈಗಲೂ ನಟನೆಯಲ್ಲಿ ಬಿಜಿ. ‘ಲವ್ ಅಗೇನ್’, ‘ಸಿಟಡೆಲ್’ ಎಂಬ ಎರಡು ಹಾಲಿವುಡ್ ಪ್ರಾಜೆಕ್ಟ್​ಗಳಲ್ಲಿ ನಟಿಸುತ್ತಿದ್ದು, ‘ಜೀಲೇ ಝುರಾ’ ಎಂಬ ಹಿಂದಿ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net