

ನವದೆಹಲಿ: ಬಣ್ಣದ ಲೋಕವೇ ಹಾಗೆ. ಅದೆ ಮಾಯಾ ಜಗತ್ತು. ಆಕರ್ಷಣೆಯೇ ಅಲ್ಲಿ ಬಂಡವಾಳ. ಅಲ್ಲಿ ತಾರೆಯರು ಜಾತಿ, ಮತ ಬಿಟ್ಟು ಮದುವೆಯಾಗುವುದು, ರಿಲೇಷನ್ಷಿಪ್ನಲ್ಲಿ ಬದುಕುವುದು, ವಿಚ್ಛೇದನ ಇವೆಲ್ಲ ಹೊಸದೇನಲ್ಲ. ಆದರೆ ಮದುವೆಯಾಗಿ 7 ವರ್ಷದ ನಂತರವೂ ದಕ್ಷಿಣ ಚಿತ್ರರಂಗದ ಹಿರಿಯ ನಟಿ ಪ್ರಿಯಾಮಣಿ ಮುಸ್ಲಿಂ ಸಮುದಾಯದಲ್ಲಿ ಮದುವೆಯಾಗಿದ್ದಕ್ಕಾಗಿ ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ. ಈಗ ಟೀಕಾಕಾರರಿಗೆ ಪ್ರಿಯಾಮಣಿ(Priyamani ) ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಪ್ರಿಯಾಮಣಿ ಬಹಿರಂಗವಾಗಿ ಮಾತನಾಡಿದ್ದು, ಈದ್ ಆಚರಣೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ವಿಮರ್ಶಕರು, ನೆಟ್ಟಿಗರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಿಯಾಮಣಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ದಕ್ಷಿಣ ಚಿತ್ರರಂಗದ ಹೊರತಾಗಿ ಹಿಂದಿ ಚಿತ್ರರಂಗದಲ್ಲಿ ನಟಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಿಯಾಮಣಿ ದೀರ್ಘಕಾಲದವರೆಗೆ ಡೇಟಿಂಗ್ ಮಾಡಿದ ನಂತರ ಮುಸ್ತಫಾ ರಾಜ್ ರನ್ನು 2017 ರಲ್ಲಿ ವಿವಾಹವಾದರು. ಮುಸ್ತಫಾ ಮುಸ್ಲಿಂರಾಗಿರುವುದರಿಂದ ಈ ವಿಚಾರವಾಗಿ ಪ್ರಿಯಾಮಣಿ ನಿತ್ಯ ಅಭಿಮಾನಿಗಳಿಂದ ಟ್ರೋಲ್ ಗೆ ಗುರಿಯಾಗುತ್ತಿದ್ದರು.
'ನಾನು ಹುಟ್ಟು ಹಿಂದೂ' ಎಂದು ಪ್ರಿಯಾಮಣಿ ಅಂತರ್ಧರ್ಮದ ಮದುವೆ ಬಗ್ಗೆ ಮೌನ ಮುರಿದು, ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.