

ರಾಣೆಬೆನ್ನೂರ: ನಗರದ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ನಾಮಲಕ ರಾರಾಜಿಸುತ್ತಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಆದೇಶದ ಪ್ರಕಾರ ಕನ್ನಡ ಅಕ್ಷರಗಳು ಶೇ. 60ರಷ್ಟು ದೊಡ್ಡದಾಗಿ ಇರಬೇಕು. ಇಂಗ್ಲಿಷ ಅಕ್ಷರಗಳು ಶೇ. 40ರಷ್ಟು ಸಣ್ಣದಾಗಿ ಇರಬೇಕು. ಈ ಎಲ್ಲ ನಿಯಮಗಳನ್ನು ಮೀರಿ ಇಂಗ್ಲಿಷ ನಾಮಫಲಕಗಳೇ ನಗರದಾದ್ಯಂತ ರಾರಾಜಿಸುತ್ತಿವೆ. ಕನ್ನಡ ನಾಮಫಲಕಗಳು ಇಲ್ಲದಂತೆ ಆಗಿದೆ.
ಆದ್ದರಿಂದ ಎಲ್ಲ ಶಾಲೆಗಳಿಗೆ ಬಿಇಒ ಕಚೇರಿ ಮೂಲಕ ನೋಟಿಸ್ ಜಾರಿ ಮಾಡಿ ಕೂಡಲೇ ಇಂಗ್ಲಿಷ್ ನಾಮಲಕ ತೆಗೆದು ಕನ್ನಡ ನಾಮಲಕ ಅಳವಡಿಸಿಕೊಳ್ಳಲು ಸೂಚಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಟನೆಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಪ್ರಧಾನ ಕಾರ್ಯದಶಿರ್ ಶಿವಕುಮಾರ ಜಾಧವ, ಚಂದ್ರಪ್ಪ ಬಣಕಾರ, ಮಲ್ಲಿಕಾರ್ಜುನ ಸಾವಕ್ಕಳವರ, ಪರಶುರಾಮ ಕುರುವತ್ತಿ, ಗೋಪಿ ಕುಂದಾಪುರ, ಮೃತುಂಜಯ ಕರಿಯಜ್ಜಿ, ಆನಂದ ಲಮಾಣಿ, ಮರಡೆಪ್ಪ ಚಳಗೇರಿ, ರೇವಣಸಿದ್ದಯ್ಯ ಸಣ್ಣಸಂಗಾಪುರ, ಹನುಮಂತ ನೇಕಾರ ಮತ್ತಿತರರು ಉಪಸ್ಥಿತರಿದ್ದರು.