

* ಕಿರುವಾರ ಎಸ್. ಸುದರ್ಶನ್ ಕೋಲಾರ
ನಗರದಲ್ಲಿ ಹೈಟೆಕ್ ಖಾಸಗಿ ಬಸ್ ನಿಲ್ದಾಣ, ಬಹುಪಯೋಗಿ ವಾಣಿಜ್ಯ ಮಳಿಗೆ ಸಂಕೀರ್ಣ ನಿರ್ಮಾಣಕ್ಕಾಗಿ ಕೋಲಾರ ನಗರಸಭೆ ಮುಂದಾಗಿದ್ದು, 13.18 ಕೋಟಿ ರೂ. ವೆಚ್ಚದ ವಿಸತ ಯೋಜನಾ ವರದಿ ಸಿದ್ಧಪಡಿಸಿದೆ.
ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿರುವ ನಗರವು ವರ್ಷದಿಂದ ವರ್ಷಕ್ಕೆ ಭೌಗೋಳಿಕ ಪ್ರದೇಶ ವಿಸ್ತರಿಸಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶವಲ್ಲದೆ ಹೊರ ತಾಲೂಕು, ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ನಗರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ನಗರಸಭೆಗೆ ಬರುತ್ತಿರುವ ಆದಾಯವ ಮೂಲ ಹೆಚ್ಚಿಸಲು ಆಡಳಿತ ಮಂಡಳಿ ಯೋಜನೆ ರೂಪಿಸಿದೆ.
ಇದಕ್ಕಾಗಿ ಈಗಾಗಲೇ ರಾಜ್ಯ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಯೋಜನೆಯಡಿ ಒಟ್ಟು 1.22 ಎಕರೆಯಲ್ಲಿ ಉದ್ದೇಶಿತ ಕಟ್ಟಡ ನಿರ್ಮಾಣ ಮಾಡಲು ನೀಲ ನೆ ತಯಾರಿಸಿದ್ದು, 13.18 ಕೋಟಿ ರೂ. ವೆಚ್ಚಕ್ಕೆ ಡಿಪಿಆರ್ ತಯಾರಿಸಿದೆ.
ಬಸ್ ನಿಲ್ದಾಣ ಸೇರಿ ಮೂರು ಅಂತಸ್ತಿನ ಕಟ್ಟಡದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂಬುದರ ಬಗ್ಗೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಿಪಿಟಿ ಪ್ರದರ್ಶನ ಮೂಲಕ ಡಿಪಿಆರ್ಗೆ ಅನುಮೋದನೆ ಸಹ ಪಡೆದುಕೊಂಡಿದ್ದಾರೆ.
ನಗರಸಭೆಯಿಂದ ಹಳೇ ಬಸ್ ನಿಲ್ದಾಣ ನಿರ್ವಹಣೆಯಾಗುತ್ತಿದ್ದು, ಸದ್ಯಕ್ಕೆ ಇಂದಿರಾ ಕ್ಯಾಂಟೀನ್, 22 ವಾಣಿಜ್ಯ ಮಳಿಗೆಗಳಿವೆ. ಜತೆಗೆ ಹೂವು ಮಾರುಕಟ್ಟೆ, ಗೋಪುರ ಗಡಿಯಾರ, ಸಣ್ಣ ಸಣ್ಣ ಹೂವು ಮಾರಾಟಗಾರರು, ಹಣ್ಣು ಮತ್ತು ತರಕಾರಿ ಮಾರಾಟಗಾರರೂ ಇದ್ದಾರೆ. ಇದನ್ನೆಲ್ಲ ಕೆಡವಿ ಕಾಮಗಾರಿ ಕೈಗೆತ್ತಿಕೊಳ್ಳಲು ರೂಪುರೇಷೆ ಕೈಗೊಳ್ಳಲಾಗಿದೆ. ಈಗಾಗಲೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವವರನ್ನು ಮನವೊಲಿಸಿ ತಾತ್ಕಾಲಿಕವಾಗಿ ತೆರವುಗೊಳಿಸಲು ಗಡುವು ನೀಡಲಾಗಿದೆ. ಜತೆಗೆ ಪರ್ಯಾಯ ಜಾಗಕ್ಕೆ ಕಳಿಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಕೆಟ್ಟಿರುವ ಕ್ಲಾಕ್ ಟವರ್ ದುರಸ್ತಿ, ಇಂದಿರಾ ಕ್ಯಾಂಟೀನ್ಅನ್ನು ಬಸ್ ನಿಲ್ದಾಣದ ಮಧ್ಯ ಭಾಗದಲ್ಲಿ ನಿರ್ಮಿಸಲು ಕ್ರಮವಹಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ಅಗತ್ಯ ಅನುದಾನ ಬಿಡುಗಡೆಗೆ ಕೋರಿದ್ದಾರೆ.
* ಏನೆಲ್ಲ ಸೌಲಭ್ಯ ಇರಲಿದೆ?
ನೆಲ ಮಹಡಿಯಲ್ಲಿ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ, ರೆಸ್ಟೋರೆಂಟ್, ಶೌಚಗೃಹ. ಲ್ಟ್ೀ, ಮೊದಲ ಮತ್ತು 2ನೇ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ, ಶೌಚಗೃಹ ಒಳಗೊಂಡಿರುತ್ತದೆ. ನಿರ್ಮಾಣವಾಗುವ ವಾಣಿಜ್ಯ ಮಳಿಗೆಗಳನ್ನು ಪ್ರಸ್ತುತ ಇರುವವರಿಗೂ ಹಂಚಿಕೆ ಮಾಡಿದ ಉಳಿದ ಮಳಿಗೆಗಳನ್ನು ಹರಾಜು ಮೂಲಕ ಹಂಚಲಾಗುತ್ತದೆ. ಸರ್ಕಾರಿ ಅಥವಾ ಖಾಸಗಿ ಕಚೇರಿಗಳಿಗೂ ಬಾಡಿಗೆ ಆಧಾರದ ಮೇಲೆ ವಾಣಿಜ್ಯ ಮಳಿಗೆ ಒದಗಿಸಲು ಯೋಜನೆಯಲ್ಲಿ ರೂಪಿಸಿಕೊಳ್ಳಲಾಗಿದೆ. ಜತೆಗೆ ಹಿರಿಯ ನಾಗರಿಕರಿಗಾಗಿ ವಾಕಿಂಗ್ ಪಾಥ್ ನಿರ್ಮಾಣವು ವಿಶೇಷವಾಗಿದೆ.
ಕೋಟ್...
ಈಗಿನ ಕಾಲಕ್ಕೆ ತಕ್ಕಂತೆ ಹೈಟೆಕ್ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದ್ದು. ಬಸ್ ನಿಲ್ದಾಣದ ಜತೆಗೆ ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಾಣ ಮಾಡಲಾಗುವುದು. ಇದು ನಗರಸಭೆಗೆ ಮೂಲ ಆದಾಯ ಕ್ರೂಡಿಕರಿಸಿ ಕೊಡುವ ಸಂಪನ್ಮೂಲವಾಗಲಿದೆ.
- ಕೊತ್ತೂರು ಜಿ.ಮಂಜುನಾಥ್, ಶಾಸಕ, ಕೋಲಾರ
ಕೋಟ್...
ಡಲ್ಟ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಿ ಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಟೆಂಡರ್ ಕರೆದು ಕೆಲಸ ಶುರು ಮಾಡಲಾಗುವುದು. ಈ ಯೋಜನೆಯು ಮಾದರಿಯಾಗಲಿದ್ದು, ನಗರಸಭೆಗೆ ಆದಾಯ ಬರುವ ಕೇಂದ್ರವಾಗಲಿದೆ.
- ನವೀನ್ ಚಂದ್ರ, ಪೌರಾಯುಕ್ತ, ಕೋಲಾರ ನಗರಸಭೆ