ಬೀಳಗಿ ಪಟ್ಟಣದ ಸರ್ಕಾರಿ ಎಂಪಿಎಸ್ ಶಾಲೆ ಹತ್ತಿರ ಸಮಾಜ ಕಲ್ಯಾ ಇಲಾಖೆ ಅಧೀನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಡಾ. ಅಂಬೇಡ್ಕರ ಭವನದ ಮುಂದುವರಿದ ಒಂದು ಕೋಟಿ ರೂ. ಮೊತ್ತ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಟಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಸಿ.ಎಸ್. ಗಡ್ಡದೇವರಮಠ, ದೇವೇಂದ್ರ ಧನಪಾಲ, ಅಣವೀರಯ್ಯ ಪ್ಯಾಟಿಮಠ, ಅನಿಲ ಗಚ್ಚಿನಮನಿ, ಮಹಾದೇವ ಹಾದಿಮನಿ, ಬಸವರಾಜ ಹಳ್ಳದಮನಿ ಇದ್ದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜಿ.ಟಿ. ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಎಂ.ಪಿ.ಎಸ್. ಶಾಲೆ ಹತ್ತಿರ ಬುಧವಾರ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಡಾ. ಅಂಬೇಡ್ಕರ ಭವನದಲ್ಲಿ ಮುಂದುವರಿದ ಒಂದು ಕೋಟಿ ರೂ. ಮೊತ್ತ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಕಾಮಗಾರಿಯು ಗುಣಮಟ್ಟದಾಗುವಂತೆ ನೋಡಿಕೊಳ್ಳಬೇಕು ಮತ್ತು ಅದರ ನಿರ್ವಹಣೆಯನ್ನು ಸಮಾಜದ ಮುಖಂಡರು ವಹಿಸಬೇಕು. ಡಾ. ಬಾಬು ಜಗಜೀವನರಾಮರ ಸಮುದಾಯ ಭವನ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್. ಗಡ್ಡದೇವರಮಠ, ಪ.ಪಂ. ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ನಿರ್ಮಿತ ಕೇಂದ್ರ ಇಂಜಿನಿಯರ್ ಅರುಣ, ಪ.ಪಂ. ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಯಮನಪ್ಪ ರೊಳ್ಳಿ, ಬಸವರಾಜ ಹಳ್ಳದಮನಿ, ಮಹಾದೇವ ಹದಿಮನಿ, ಹುಸೇನ ಚಲವಾದಿ ಇದ್ದರು.