

ಸೊರಬ: ಷೇರುದಾರರು ಸಂಘದ ಬಲವಧಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದ ನಿರ್ದೇಶಕರು ಮತ್ತು ಷೇರುದಾರರ ನಡುವೆ ಸಮನ್ವಯತೆ ಇದ್ದಲ್ಲಿ ಸಂಘದ ಬೆಳವಣಿಗೆ ಸಾಧ್ಯವಾಗುತ್ತದೆ. ಸಂಘವು 24 ಲಕ್ಷ ರೂ. ಲಾಭಾಂಶದಲ್ಲಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾ ಪ್ರಶಸ್ತಿ ವಿಜೇತರು, ಷೇರುದಾರರು ಹಾಗೂ ನಿವೃತ್ತ ಷೇರುದಾರ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಲ್.ಸತ್ಯನಾರಾಯಣ, ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಆರ್.ಲಿಂಗರಾಜ ಒಡೆಯರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಗಣಪತಿ, ಸಿ.ಪಿ.ಸದಾನಂದ, ಶಿವಮೂರ್ತಿ, ಕೆ.ಎಚ್.ಕೇಶವ, ನಿರ್ದೇಶಕಿ ಗಿರಿಜಾ, ಶಾರದಮ್ಮ, ರಾಜು ಬಿ.ಸಂಕಣ್ಣೇರ್, ಎನ್.ಎಸ್.ಅರುಣಕುಮಾರ್, ಎನ್.ಮಾರುತಿ, ನಿರ್ದೇಶಕ ಜಗದೀಶ್ವರಪ್ಪ ಅಂಡಿಗೆ ಇತರರಿದ್ದರು.