ಹಣ ಬಿಟ್ಟು ಬೇರೆ ಎಲ್ಲವನ್ನೂ ಮುದ್ರಿಸುತ್ತೆ! ಸದ್ಯದಲ್ಲೇ ಭಾರತಕ್ಕೂ ಬರಲಿದೆ ಇದು ರಷ್ಯಾದ ಹೈ-ಟೆಕ್ 3ಡಿ ಪ್ರಿಂಟರ್

3-68d57e6cf2520
Published on

ನವದೆಹಲಿ: ಹಣ ಹೊರತುಪಡಿಸಿ ಬೇರೆ ಎಲ್ಲವನ್ನೂ ಮುದ್ರಿಸಬಲ್ಲಂಥ ಹೈ-ಟೆಕ್ 3ಡಿ ಪ್ರಿಂಟರ್​ಅನ್ನು ರಷ್ಯಾ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಭಾರತಕ್ಕೂ ಈ ಪ್ರಿಂಟರ್ ಆಗಮಿಸಲಿದೆ. ಈ ಸಂಬಂಧ ಸಂಯೋಜಕ ಉಪಕರಣಗಳು ಹಾಗೂ ಸಾಮಗ್ರಿಗಳ ಪೂರೈಕೆಗಾಗಿ ಬಹು-ವರ್ಷಗಳ ಚೌಕಟ್ಟಿನ ವಿತರಣಾ ಒಪ್ಪಂದಗಳಿಗೆ ಭಾರತೀಯ ಘಟಕಗಳು ಈಗಾಗಲೇ ಸಹಿ ಹಾಕಿವೆ.

ಎಲ್ಲಿ ಇದರ ತಯಾರಿ? : ರಷ್ಯಾದ ಮಾಸ್ಕೋದಲ್ಲಿನ ಅತ್ಯಂತ ಭದ್ರತೆ ಹೊಂದಿರುವ ರೊಸಟೋಮ್ ಅಡಿಟಿವ್ ಟೆಕ್ನಾಲಜೀಸ್​ನಲ್ಲಿ ಈ ಪ್ರಿಂಟರ್ ಅಭಿವೃದ್ಧಿಪಡಿಸ ಲಾಗಿದೆ. ಇದೊಂದು ಕ್ರಾಂತಿಕಾರಕ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ.

ಮುದ್ರಣಕ್ಕಷ್ಟೇ ಸೀಮಿತವಲ್ಲ : ಇದು ಬರೀ ಮುದ್ರಿಸುವುದಷ್ಟೇ ಅಲ್ಲದೆ, ಬಾಹ್ಯಾಕಾಶ ಕಾರ್ಯåಚರಣೆಗಳು ಮತ್ತು ಪರಮಾಣು ರಿಯಾಕ್ಟರ್​ಗಳಿಗೆ ಶಕ್ತಿ ತುಂಬುವ ನಿಖರವಾದ ಘಟಕಗಳಾಗಿ ಟೈಟಾನಿಯಂ ಅನ್ನು ಬೆಸುಗೆ ಹಾಕುತ್ತದೆ, ಕೆತ್ತಿಸುತ್ತದೆ ಮತ್ತು ನಕಲು ಕೂಡ ಮಾಡುತ್ತದೆ.

ಅತ್ಯಂತ ಅತ್ಯಾಧುನಿಕ: ಈ 3ಡಿ ಪ್ರಿಂಟಿಂಗ್ ಘಟಕಗಳು ಅತ್ಯಂತ ಅತ್ಯಾಧುನಿಕವಾಗಿದ್ದು, ಹಣವೊಂದನ್ನು ಹೊರತುಪಡಿಸಿ ಬೇರೆ ಎಲ್ಲವನ್ನೂ ಮುದ್ರಿಸಬಲ್ಲವು. ಹಣವನ್ನು ಫೆಡರಲ್ ಬ್ಯಾಂಕ್​ಗಳಷ್ಟೇ ಮುದ್ರಿಸುತ್ತವೆ ಎಂದು ಮಾಸ್ಕೋದ ರೊಸಟೊಮ್ ಸ್ಟೇಟ್ ಕಾರ್ಪೆರೇಷನ್​ನ ಅಡಿಟಿವ್ ಮ್ಯಾನುಫ್ಯಾಕ್ಷರಿಂಗ್ ಬಿಜಿನೆಸ್ ಘಟಕದ ನಿರ್ದೇಶಕ ಇಲ್ಯಾ ವ್ಲಾದಿಮಿರೊವಿಚ್ ಕವೆಲಾಷ್ವಿ ಹೇಳಿದ್ದಾರೆ.

ಹೇಗಿದರ ಬಳಕೆ?

ಉನ್ನತ ತಂತ್ರಜ್ಞಾನವನ್ನು ಸ್ಥಳೀಕರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕಿಂಗ್ ಇನ್ ಇಂಡಿಯಾ’ ಕರೆಯಂತೆ ಈ ಮುದ್ರಕ ಭಾರತದಲ್ಲಿ ಕಾರ್ಯನಿರ್ವಹಿಸಲಿದೆ. ಈ ಮುದ್ರಕವನ್ನು ಬಳಸಿಕೊಂಡು, ಸರಳವಾದ ಟೈಟಾನಿಯಂ ಅಥವಾ ಸ್ಟೇನ್​ಲೆಸ್ ತಂತಿಯನ್ನು ಸಂಸ್ಕರಿಸಬಹುದು ಮತ್ತು ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್ ಕಿರಣಗಳನ್ನು ಉತ್ಪಾದಿಸಲು ಕಷ್ಟವಾದಂಥ ಸಂಕೀರ್ಣ ಘಟಕಗಳಾಗಿ ಪರಿವರ್ತಿಸಬಹುದು.

58 ಕೋಟಿ ರೂ. ಒಪ್ಪಂದ

ಈ ಸಂಬಂಧ ಸಂಯೋಜಕ ಉಪಕರಣಗಳು ಹಾಗೂ ಸಾಮಗ್ರಿಗಳ ಪೂರೈಕೆಗಾಗಿ ಬಹು-ವರ್ಷಗಳ ಚೌಕಟ್ಟಿನ ವಿತರಣಾ ಒಪ್ಪಂದಗಳಿಗೆ ಭಾರತೀಯ ಘಟಕಗಳು ಈಗಾಗಲೇ ಸಹಿ ಹಾಕಿದ್ದು, ಇದರ ಮೌಲ್ಯವೇ 1.5 ಬಿಲಿಯನ್ ರೂಬೆಲ್ಸ್ (ಸುಮಾರು 158 ಕೋ. ರೂ.) ಆಗಿದೆ. ಭಾರತದ ಅಜ್ಞಾತಸ್ಥಳಕ್ಕೆ ಕಳುಹಿಸಿಕೊಡಲಾಗುವ ಈ ಮುದ್ರಕದ ವೆಚ್ಚ 20 ಕೋಟಿ ರೂ. ಆಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net