ಗುರುಗ್ರಾಮದಲ್ಲಿ ಪ್ರಿಯಾಂಕಾ ವಾಸ್ತವ್ಯ; ದೆಹಲಿಯಿಂದ ಸ್ಥಳಾಂತರ

Priyanka Gandhi
Published on

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ನಿವಾಸವನ್ನು ತಾತ್ಕಾಲಿಕವಾಗಿ ಗುರುಗ್ರಾಮಕ್ಕೆ ಬದಲಾಯಿಸಿದ್ದಾರೆ. ಪತಿ ರಾಬರ್ಟ್ ವಾದ್ರಾ ಒಡೆತನದ ಪೆಂಟ್​ಹೌಸ್​ಗೆ ಅವರು ಶುಕ್ರವಾರ ಸ್ಥಳಾಂತರಗೊಂಡರು.

ಗುರುಗ್ರಾಮದ ಸೆಕ್ಟರ್ 43ರಲ್ಲಿ ಈ ಬಂಗಲೆಯಿದೆ. ದೆಹಲಿಯಲ್ಲಿರುವ ಸರ್ಕಾರಿ ಬಂಗಲೆ ತೊರೆದ ನಂತರ ಅವರು ಗುರುಗ್ರಾಮದ ಭವ್ಯ ಮನೆಯಲ್ಲೇ ವಾಸಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ಪ್ರಿಯಾಂಕಾ ಖಾಲಿ ಮಾಡಿದ್ದಾರೆ. ಅದೇ ಪ್ರದೇಶದಲಿ ್ಲ ಇನ್ನೊಂದು ಮನೆ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಆ ನಿವಾಸದ ರಿಪೇರಿ ನಡೆಯುತ್ತಿರುವುದರಿಂದ ಗುರುಗ್ರಾಮದಲ್ಲಿರುವ ಮನೆಯಲ್ಲಿ ಕುಟುಂಬದೊಂದಿಗೆ ಕೆಲ ಕಾಲ ವಾಸಿಸಲು ನಿರ್ಧರಿಸಿದ್ದಾರೆ.

ಮನೆ ದುರಸ್ತಿಗೆ ಸುಮಾರು ಮೂರು ತಿಂಗಳು ಬೇಕಾಗಬಹುದೆಂದು ಮೂಲಗಳು ಹೇಳಿವೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ತೆರವು ಮಾಡುವಂತೆ ಇತ್ತೀಚೆಗೆ ಸರ್ಕಾರ ಸೂಚನೆ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net