

ರಾಣೆಬೆನ್ನೂರ: ಸೇವಾ ಅವಧಿಯಲ್ಲಿ ನಿವೃತ್ತಿ ಅನಿವಾರ್ಯವಾಗಿದೆ. ಜೀವನದ ಮೈಲುಗಲ್ಲನ್ನು ಪ್ರತಿಯೊಬ್ಬರು ಸಾಗಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಶ್ರೀ ಅರಳಿ ಸಿದ್ದಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಶನಿವಾರ ಪ್ರಾಚಾರ್ಯ ಆರ್.ಎಫ್. ಅಯ್ಯನಗೌಡ್ರ ಅವರು ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜ್ ಶಿಕ್ಷಣ ಇಲಾಖೆಯಲ್ಲಿ ಸುಮಾರು 34 ವರ್ಷ ಸೇವೆ ಸಲ್ಲಿಸಿದ ಪ್ರಾಚಾರ್ಯ ಅಯ್ಯನಗೌಡ್ರ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ಅವಧಿಯಲ್ಲಿ ಕಾಲೇಜ್ ಬಹಳಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆ. ಇಂತಹ ವ್ಯಕ್ತಿಗಳ ಸೇವೆ ಅಮೂಲ್ಯವಾಗಿದ್ದು, ನಿವೃತ್ತಿ ನಂತರ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ, ಕಾಲೇಜ್ ಅಭಿವೃದ್ಧಿ ಸದಸ್ಯ ಬಸವರಾಜ ಕಾರಗಿ, ಮಹದೇವಪ್ಪ ನಾರಜ್ಜಿ, ಚನ್ನಬಸಪ್ಪ ನಾಡಿಗೇರ, ಸಂತೋಷ ಹೆಡ್ಡನವರ, ಸಾಂಸತಿಕ ವಿಭಾಗದ ಸಂಚಾಲಕ ಡಾ.ಎಸ್.ಪಿ.ಗೌಡರ, ಅಂಬಿಕಾ ಹೊಸಮನಿ, ಡಾ.ಬಸವರಾಜ ಹುಗ್ಗಿ, ಡಾ.ಹನುಮಂತರಾಜು ಎನ್.ಬಿ., ರವಿಕುಮಾರ, ಲೋಹಿಯಾ ಕೆಜಿಆರ್., ಹನುಮಂತರಾಜ ಎನ್.ಬಿ., ಡಾ.ರವಿ..ಎಂ., ಕಚೇರಿ ಅಧಿಕ್ಷಕ ಸತೀಶ ಎಂ., ಇತರರಿದ್ದರು.