ಬರೇಲಿಯ ಈ ಶಿಕ್ಷಕಿಯನ್ನು ಹೊಗಳಿದ ಪ್ರಧಾನಿ ಮೋದಿ

PM Narendra Modi
Published on

ಬರೇಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಕಲ್ಪ ಸಪ್ತಾಹಕ್ಕೆ ಶನಿವಾರ ಚಾಲನೆ ನೀಡಿದರು. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜನರೊಂದಿಗೆ ಸಂವಾದ ನಡೆಸಿದರು. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದ ಜನರನ್ನು ಶ್ಲಾಘಿಸಿದರು. ದೇಶದ ಭವಿಷ್ಯಕ್ಕೆ ಉತ್ತಮ ಶಿಕ್ಷಣ ನೀಡುವ ಶಿಕ್ಷಕರೊಂದಿಗೆ ಅಂದರೆ ಯುವಜನತೆಯೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು.

ಶನಿವಾರ ಸಂಕಲ್ಪ ಸಪ್ತಾಹದ ಪ್ರಾರಂಭದಲ್ಲಿ ದೇಶದ ವಿವಿಧ ಭಾಗಗಳ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಮೋದಿಯವರು ಈ ಶಿಕ್ಷಕರ ಪೈಕಿ ಉತ್ತರ ಪ್ರದೇಶದ ಬರೇಲಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಂಜನಾ ಅಗರ್ವಾಲ್ ಅವರೊಂದಿಗೆ ಮಾತನಾಡಿದರು.

ರಂಜನಾ ಅವರು ಶಿಕ್ಷಣದ ಕುರಿತು ವಿಶಿಷ್ಟ ವಿಧಾನವನ್ನು ಹೇಳಿದರು. ಈ ಸಂವಾದದಲ್ಲಿ ರಂಜನಾ ಅವರು ಸಾಂಪ್ರದಾಯಿಕ ಬೋಧನಾ ವಿಧಾನಗಳ ಬದಲಿಗೆ ಚಟುವಟಿಕೆ ಆಧಾರಿತ ಕಲಿಕೆಯ ಆಯ್ಕೆಯನ್ನು ಪ್ರಸ್ತಾಪಿಸಿದರು. ಬಾಲ ಸಭೆಗಳು, ಸಂಗೀತ ಪಾಠಗಳು, ಕ್ರೀಡೆಗಳು ಮತ್ತು ದೈಹಿಕ ತರಬೇತಿ ಇತ್ಯಾದಿಗಳನ್ನು ಆಯೋಜಿಸುವ ಉದಾಹರಣೆಗಳನ್ನು ನೀಡಿದರು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ತಂತ್ರಜ್ಞಾನದ ಬಳಕೆಯನ್ನು ಪ್ರಸ್ತಾಪಿಸಿದರು. ತನ್ನ ಜಿಲ್ಲೆಯ ಎಲ್ಲಾ 2,500 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳ ಲಭ್ಯತೆಯ ಬಗ್ಗೆ ಅವರು ಮಾಹಿತಿ ನೀಡಿದರು.

ರಂಜನಾ ನೇಮಕಗೊಂಡಿರುವ ಶಹಪುರದ ಶಾಲೆಯಲ್ಲಿ ಸರಾಸರಿ 95 ಪ್ರತಿಶತ ವಿದ್ಯಾರ್ಥಿಗಳು ಇದ್ದಾರೆ. ಅವರ ಪ್ರಯೋಗಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರ ಪ್ರಯತ್ನವನ್ನು ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net