ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ಏನು ಹೇಳಲಿದ್ದಾರೆ ನಮೋ? PM Modi

PM Modi
Published on

PM Modi: ಇಂದು ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಯಾವ ವಿಚಾರ ಮಾತನಾಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಆದರೆ, ನಾಳೆಯಿಂದ ದೇಶಾದ್ಯಂತ ಜಿಎಸ್​ಟಿ ದರದಲ್ಲಿ ಭಾರಿ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಅದರ ಬಗ್ಗೆ ಮಾತನಾಡಬಹುದು ಎಂದು ಹೇಳಲಾಗುತ್ತಿದೆ.

ನಾಳೆ ರಾಷ್ಟ್ರದಾದ್ಯಂತ GST 2.0 ಸುಧಾರಣೆಗಳು ಅನುಷ್ಠಾನಕ್ಕೆ ಬರಲಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿಯೇ ಪ್ರಧಾನಿ ಮೋದಿ ಅದರ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, H1 B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮದ ಬಗ್ಗೆಯೂ ಪ್ರಧಾನಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಮೆರಿಕದ ಈ ಕ್ರಮವು ಅಲ್ಲಿ ಕೆಲಸ ಮಾಡುವ ಭಾರತೀಯ ಟೆಕ್ಕಿಗಳ ದೊಡ್ಡ ಸಮೂಹದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಲ್ಲದೆ, ಸುಂಕ ಸಮರದಿಂದಾಗಿ ಅಮೆರಿಕ-ಭಾರತ ಸಂಬಂಧ ಹದಗೆಟ್ಟಿದ್ದು ಈ ಬಗ್ಗೆಯೂ ಮೋದಿ ಪ್ರಸ್ತಾಪ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯವಾಗಿ ಪ್ರಧಾನಿ ಮೋದಿ ಅವರು ಜಿಎಸ್​ಟಿ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಳೆಯಿಂದ ದೇಶಾದ್ಯಂತ ಜಿಎಸ್​ಟಿ ದರದಲ್ಲಿ ಭಾರಿ ಸುಧಾರಣೆ ಕಾಣಲಿದೆ. ಈ ಹಿಂದೆ ನಾಲ್ಕು ಸ್ಲ್ಯಾಬ್​ ( ಶೇ. 5, 12, 18, 28) ಇದ್ದ ಜಿಎಸ್​ಟಿ ಅನ್ನು ಕೇವಲ ಎರಡು ಸ್ಲ್ಯಾಬ್​ (ಶೇ. 5 ಮತ್ತು 18) ಗೆ ಇಳಿಸಲಾಗಿದೆ. ಅಲ್ಲದೆ, ಅನೇಕ ವಸ್ತುಗಳನ್ನು ಝೀರೋ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ದೇಶದ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಆರ್ಥಿಕ ಹೊರೆ ಇಳಿಯಲಿದೆ. ನವರಾತ್ರಿ ಅಥವಾ ದಸರಾಗೂ ಮುನ್ನ ಕೇಂದ್ರ ಸರ್ಕಾರ ಜಿಎಸ್​ಟಿ ಸುಧಾರಣೆ ಉಡುಗೊರೆ ನೀಡಿದ್ದು, ಇದರಿಂದ ದೇಶದ ಜನತೆ ಖುಷಿಯಾಗಿದ್ದಾರೆ. ಹೀಗಾಗಿ, ಜಿಎಸ್​ಟಿ ಜಾರಿಗೂ ಮುನ್ನವೇ ಪ್ರಧಾನಿ ಮೋದಿ ದೇಶದ ಜತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಮೋದಿ ಏನು ಹೇಳಲಿದ್ದಾರೆ ಎಂಬುದನ್ನು ತಿಳಿಯಬೇಕಾದರೆ ಇಂದು ಸಂಜೆಯವರೆಗೆ ಕಾಯಬೇಕಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net