VIDEO: ಶ್ರೀರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ...

PM MOdi sashtang pranam
Published on

ಅಯೋಧ್ಯೆಯಲ್ಲಿಂದು ಹಬ್ಬ. ವೇದ ಮಂತ್ರಗಳ ಪಠಣ, ಶಂಖ ನಾದಗಳ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಇಂದು ಬೆಳಗ್ಗೆ ಅಯೋಧ್ಯೆಯ ರಾಮಜನ್ಮಭೂಮಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.

ರಾಮನ ವಿಗ್ರಹ ಇರುವ ಗುಡಿಯ ಮೆಟ್ಟಿಲುಗಳ ಕೆಳಗಿನ ನೆಲದ ಮೇಲೆ ಪ್ರಧಾನಿ ಮೋದಿಯವರು ಸಾಷ್ಟಾಂಗ ನಮಸ್ಕಾರ ಮಾಡಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ.

ಅಯೋಧ್ಯೆಗೆ ಆಗಮಿಸಿದ ಮೋದಿಯವರನ್ನು ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಬರಮಾಡಿಕೊಂಡಿದ್ದಾರೆ. ನಂತರ ಪ್ರಧಾನಿಯವರು ಶ್ರೀರಾಮಲಲ್ಲಾ ವಿಗ್ರಹಕ್ಕೆ ಪೂಜೆ, ಆರತಿ ನೆರವೇರಿಸಿದ್ದಾರೆ. ಪ್ರಾರ್ಥನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net