

ನವದೆಹಲಿ: ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ಸಿಖ್ಖರ ಧರ್ಮಗುರು ಜಯಂತಿಗೆ ನಮನ ಸಲ್ಲಿಸುತ್ತೇನೆ. ಆ ಅವಕಾಶ ಇಂದು ನನಗೆ ದೊರಕಿದೆ. ಹಿಂದೂಸ್ಥಾನ್ ಕನಸನ್ನು ನನಸು ಮಾಡಲು ಹಲವರು ಇದ್ದಾರೆ. ಪರಂಪರೆಯನ್ನು ರಕ್ಷಣೆ ಮಾಡಲು ಹಲವರು ಬಲಿದಾನ ಮಾಡಿದ್ದಾರೆ. ಗುರುಗಳು ಸಮಾಜದ ಜವಾಬ್ದಾರಿ ಹೊತ್ತಿದ್ದರು. ಇದು ಅಮೃತ ಮಹೋತ್ಸವಕ್ಕಿಂತ ವಿಶೇಷವಾಗಿದೆ ಎಂದು ಪಿಎಂ ಮೋದಿ ಹೇಳಿದರು.
ಶ್ರೀ ತೇಜ್ ಬಹದ್ದೂರ್ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿಯನ್ನು ಪಿಎಂ ಮೋದಿ ಬಿಡುಗಡೆ ಮಾಡಿದರು. ಅಲ್ಲದೇ 400 ಸಿಖ್ ಸಂಗೀತಗಾರರಿಂದ ಶಬಾದ್ ಕೀರ್ತನೆ ನಡೆಸಲಾಯಿತು.