

ಹಾಪುರ (ಉತ್ತರ ಪ್ರದೇಶ) : ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾದ ಪ್ರಮುಖ ಆರೋಪಿ ಕೆಲವು ದಿನಗಳ ನಂತರ ಆ ಪ್ರದೇಶದಲ್ಲಿ ದೇಸೀ ಮದ್ಯದೊಂದಿಗೆ ಸೋಮವಾರ ಹಾಜರಾಗಿದ್ದ.
ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಈ ವ್ಯಕ್ತಿ ಪರಾರಿಯಾಗಿದ್ದಾನೆ.
ಆರೋಪಿಯನ್ನು ದಳಪತ್ ಎಂದು ಗುರುತಿಸಲಾಗಿದೆ. ಅಮ್ರೋಹಾದ ಗಜ್ರೌಲಾದ ಮಹಮೂದ್ಪುರ ಗ್ರಾಮದ ನಿವಾಸಿ.
ಇದನ್ನೂ ಓದಿ: ಗೊರಕೆ ಹೊಡೆದನೆಂದು ಕೊಂದೇಬಿಡೋದಾ?
ಸ್ಥಳೀಯರಿಂದ ಮಾಹಿತಿ ದೊರೆತ ನಂತರ ಪೊಲೀಸರು ಹಲವು ತಂಡಗಳನ್ನು ರಚಿಸಿ ಅರಣ್ಯ ಪ್ರದೇಶಗಳಾದ್ಯಂತ ಶೋಧ ಕಾರ್ಯ ನಡೆಸಿದರು. ಕಳೆದ 6 ದಿನಗಳಿಂದ ಪೊಲೀಸ್ ತಂಡಗಳು ಹಾಪುರದ ಗಾರ್ಹಿ ಮತ್ತು ಅಮ್ರೋಹಾದ ಗಜ್ರೌಲಾ ಸುತ್ತ ಶೋಧ ಕಾರ್ಯ ನಡೆಸಿವೆ.
6 ವರ್ಷದ ಬಾಲಕಿಯನ್ನು ಗಾರ್ಹಿಯಲ್ಲಿರುವ ಆಕೆಯ ಮನೆಯ ಹೊರಗಿನಿಂದ ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಶುಕ್ರವಾರ, ಬಾಲಕಿ ಮನೆ ಸಮೀಪದ ಸ್ಥಳದಲ್ಲಿ ಪತ್ತೆಯಾಗಿದ್ದಾಳೆ.
ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಿಂದ ಬಾಲಕಿಯನ್ನು ಮೀರತ್‌ನ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಬಾಲಕಿಯ ಗುಪ್ತಾಂಗಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಮಲ ವಿಸರ್ಜನೆಯನ್ನು ಖಚಿತಪಡಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಮೂಲಕ ಪ್ರತ್ಯೇಕ ಕೊಳವೆಯನ್ನು ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರ, ಹಾಪುರ್ ಪೊಲೀಸರು ಮೂವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಬಾಲಕಿ ಅವನೊಂದಿಗೆ ಹೋಗುವಾಗ ಪ್ರತಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರಿಂದ ಆರೋಪಿಯು ಬಾಲಕಿಗೆ ಪರಿಚಿತನಾಗಿರಬಹುದೆಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.