ಬೆಲೆ ಕಟ್ಟಲಾಗದ ಅನುಬಂಧ ರಕ್ಷಾಬಂಧನ

raksha bandana in centrol jail
ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ರಕ್ಷಾಬಂಧನ ಸಮಾರಂಭದಲ್ಲಿ ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆ ಮಕ್ಕಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಡಾ. ಆರ್.ಅನಿತಾ, ವಿಶಾಲಾಕ್ಷಿ, ಧರ್ಮಪ್ಪ, ಗಂಗಾ ನಾಯ್ಕ, ಶೋಭಾ, ಸುಜಾತಾ, ರುದ್ರಪ್ಪ, ಶ್ರೀಕಾಂತ್, ಸಿಸ್ಟರ್ ಹೆಲೆನ್, ಪ್ರವೀಣ್‌ಕುಮಾರ್, ಗೋಪಾಲಕೃಷ್ಣ, ಎಸ್.ಎನ್. ಲೀಲಾ ಇದ್ದರು.
Published on

ಶಿವಮೊಗ್ಗ: ಭಾರತೀಯ ಹಬ್ಬಗಳ ಪರಂಪರೆಯಲ್ಲಿ ಅಣ್ಣ-ತಂಗಿಯರ ಬೆಲೆ ಕಟ್ಟಲಾಗದ ಅನುಬಂಧದ ಸಂಕೇತವಾಗಿ ಆಚರಿಸಲಾಗುವ ರಕ್ಷಾಬಂಧನ ಹಬ್ಬವು ವಿಶೇಷ ಮಹತ್ವ ಹೊಂದಿದೆ. ಮಾನವೀಯ ಸಂಬಂಧಗಳಲ್ಲಿ ತಾಯಿ ಮತ್ತು ಅಣ್ಣ-ತಂಗಿಯರ ಸಂಬಂಧ ಅತ್ಯಂತ ಪವಿತ್ರವೂ ಶ್ರೇಷ್ಠವೂ ಆಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಹೇಳಿದರು.

ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ರಕ್ಷಾಬಂಧನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತನ್ನ ಸಹೋದರಿಯು ಕಟ್ಟಿದ ರಕ್ಷಾದಾರಕ್ಕೆ ಪ್ರತಿಯಾಗಿ ಸಹೋದರನು ಆಕೆಯ ರಕ್ಷಣೆ ಮಾಡುವ ಮಹೋನ್ನತವಾದ ಮೌಲ್ಯವನ್ನು ರಕ್ಷಾಬಂಧನವು ಸಾರುತ್ತದೆ. ಅಣ್ಣನಾಗಿ, ತಮ್ಮನಾಗಿ ಸಹೋದರಿಗೆ ಸಹಾಯ ಮಾಡುವುದು ಮತ್ತು ಸಹೋದರಿಯ ರಕ್ಷಣೆಯನ್ನು ಮಾಡುವುದು ರಕ್ಷಾಬಂಧನದ ಪವಿತ್ರವಾದ ಸಂದೇಶವಾಗಿದೆ. ಈ ಹಬ್ಬದ ಆಚರಣೆಯ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಅಣ್ಣ-ತಂಗಿ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವಿಶಾಲಾಕ್ಷಿ ಮಾತನಾಡಿ, ಭ್ರಾತೃತ್ವದ ದ್ಯೋತಕವಾಗಿ ಆಚರಿಸುವ ರಾಕಿ ಹಬ್ಬದಿಂದ ಸಮಾಜದಲ್ಲಿ ಮಾನವೀಯ ಮೌಲ್ಯಾದರ್ಶಗಳು ಮತ್ತಷ್ಟು ಉತ್ತಮಗೊಳ್ಳುವಂತಾಗಲಿ ಎಂದರು.
ಪಿಳ್ಳಂಗಿರಿ ಶಾಲಾ ಶಿಕ್ಷಕ ಧರ್ಮಪ್ಪ ಮಾತನಾಡಿದರು. ಪಿಳ್ಳಂಗಿರಿ ಪ್ರೌಢಶಾಲಾ ಶಿಕ್ಷಕರಾದ ಗಂಗಾ ನಾಯ್ಕ, ಶೋಭಾ, ಸುಜಾತಾ, ರುದ್ರಪ್ಪ, ಶ್ರೀಕಾಂತ್, ಭಾರತೀಯ ಕಾರಾಗೃಹ ಸೇವಾ ಆಯೋಗದ ಪ್ರಾಂತೀಯ ಸಂಯೋಜಕಿ ಸಿಸ್ಟರ್ ಹೆಲೆನ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಪ್ರವೀಣ್‌ಕುಮಾರ್, ಕೇಂದ್ರ ಕಾರಾಗೃಹದ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಎಸ್.ಎನ್.ಲೀಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net