ಹಿರಿಯ ಅಧಿಕಾರಿಗಳ ಒತ್ತಡ; ಬುಲೆಟ್ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​! | Police

by (5)
Published on

ಕೇರಳ: ಸ್ಪೇಷಲ್​ ಅಪರೇಷನ್​ ಗ್ರೂಪ್​ನ(ಎಸ್​ಒಜಿ) ಪೊಲೀಸ್(Police)​ ಅಧಿಕಾರಿಯೊಬ್ಬರು ಇಲ್ಲಿನ ಮಲ್ಲಪುರಂ ಅರಿಕೋಡ್​​ ಕ್ಯಾಂಪ್​ನಲ್ಲಿ ಭಾನುವಾರ ತಡರಾತ್ರಿ ಗುಂಡೇಟಿನಿಂದ ಗಾಯಗಳಿದ್ದು, ಶವವಾಗಿ ಪತ್ತೆಯಾಗಿದ್ದಾರೆ.

ವಯನಾಡ್​ನ ಪಂಡಿಜರೆತಾರಾ ನಿವಾಸಿ ವಿನೀಶ್​(37) ಮೃತ ಎಂದು ಗುರುತಿಸಲಾಗಿದ್ದು, ಮೊದಲ ಎನ್​ಒಜಿ ಬ್ಯಾಚ್​ನ ಅಧಿಕಾರಿಯಾಗಿದ್ದರು. ರಾತ್ರಿವೇಳೆ ಘಟನೆ ನಡೆದಿದ್ದು, ವಿನೀಶ್​ ವಾಷ್​ರೂಮ್​ನಲ್ಲಿ ಸ್ವಯಂಪ್ರೇರಿತವಾಗಿ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿದ ತಕ್ಷಣ ಸಹದ್ಯೋಗಿ ಮತ್ತು ಸಿಬ್ಬಂದಿಗಳು ಬಂದು ವಿನೀಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ದಾರಿಯ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ.

ವಿನೀಶ್​ ಅವರು ತಮ್ಮ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಹಿರಿಯ ಅಧಿಕಾರಿಗಳು ರಜೆಗೆ ನಿರಾಕರಿದ್ದರು. ಅಲ್ಲದೇ, ಅವರು ರಜೆ ತಗೆದುಕೊಳ್ಳದೆ 40 ದಿನಗಳಿಂದ ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಅಧಿಕಾರಿಗಳ ಒತ್ತಡದಿಂದ ಮೇಲ್ನೊಟಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ವರದಿ ಉಲ್ಲೇಖಿಸಿವೆ.

ವಿನೀಶ್​ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾವಿನ ಹಿಂದಿನ ಕಾರಣಗಳನ್ನು ಪೊಲೀಸರು ಧೃಢಿಕರಿಸಿಲ್ಲ. ಮರಣೋತ್ತರ ವರದಿ ಬಂದ ಬಳಿಕ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net