ಮತಗಟ್ಟೆ ಕೇಂದ್ರದಲ್ಲೇ ಹೃದಯಾಘಾತದಿಂದ ಸತ್ತ ಮತಗಟ್ಟೆ ಅಧಿಕಾರಿ

Untitled-2
Published on

ಬಿಹಾರ: ಮತಗಟ್ಟೆಯೊಂದು ಚುನಾವಣೆ ಕಾವಿನ ನಡುವೆ ಸಾವಿಗೂ ಸಾಕ್ಷಿಯಾಗಿದೆ. ಮತಗಟ್ಟೆ ಅಧಿಕಾರಿಯೊಬ್ಬರು ಚುನಾವಣಾ ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಿಹಾರದಲ್ಲಿ ಇಂದು 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯ ಬಿರುಸಿನ ಚಟುವಟಿಕೆ ವೇಳಿ ಇಂಥದ್ದೊಂದು ದುರಂತ ಸಂಭವಿಸಿದೆ. ಮುಜಾಫರ್ ಜಿಲ್ಲೆಯ ಕತ್ರಾ ಬ್ಲಾಕ್​ನ 190ನೇ ಮತಕೇಂದ್ರಕ್ಕೆ ನಿಯೋಜಿತರಾಗಿದ್ದ ಮತಗಟ್ಟೆ ಅಧಿಕಾರಿ ಕೇದಾರ್ ರಾಜ್​ ಸಾವಿಗೀಡಾಗಿದ್ದಾರೆ. ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿ ಆಗಿರುವ ಇವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಬಿಹಾರದಲ್ಲಿ 243 ವಿಧಾನ ಸಭಾ ಕ್ಷೇತ್ರಗಳ ಚುನಾವಣೆ ಮೂರು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತದಲ್ಲಿ 71 ಕ್ಷೇತ್ರಗಳ ಚುನಾವಣೆ ಅ. 28ರಂದು ಹಾಗೂ ಎರಡನೇ ಹಂತದಲ್ಲಿ 94 ಕ್ಷೇತ್ರಗಳಿಗೆ ನ. 3ರಂದು ಚುನಾವಣೆ ನಡೆದಿತ್ತು. ನ. 10ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net