ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ

Published on

ಬೆಂಗಳೂರು: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗೆ ಕೊಡಮಾಡುವ ರಾಷ್ಟ್ರಪತಿ ಪದಕ 20 ಪೊಲೀಸರಿಗೆ ಸೇವಾ ಪದಕ ಲಭಿಸಿದೆ.
2023ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಪದಕ ಇದಾಗಿದ್ದು, ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 18 ಪೊಲೀಸರಿಗೆ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು

  • ಸೀಮಂತ್ ಕುಮಾರ್ ಸಿಂಗ್-ಎಡಿಜಿಪಿ, ಕೆಎಸ್‌ಆರ್‌ಪಿ
  • ಎಸ್. ಮುರುಗನ್, ಎಡಿಜಿಪಿ, ಸಿಎಲ್ ಆ್ಯಂಡ್ ಎಂ

ಶ್ಲಾಘನೀಯ ಸೇವಾ ಪದಕ ಪುರಷ್ಕೃತರು

  • ಸಂದೀಪ್ ಪಾಟೀಲ್, ಐಜಿಪಿ, ಕೆಎಸ್‌ಆರ್‌ಪಿ
  • ರಾಘವೇಂದ್ರ ಕೆ. ಹೆಗ್ಡೆ- ಎಸ್‌ಪಿ, ಸಿಐಡಿ
  • ಬಿ.ಎಸ್. ಮೋಹನ್‌ಕುಮಾರ್-ಡಿವೈಎಸ್‌ಪಿ ಡಿಜಿಪಿ ಕಚೇರಿ
  • ಜಿ. ನಾಗರಾಜ್-ಎಸಿಪಿ, ವಿ.ವಿ. ಪುರ ಉಪ ವಿಭಾಗ
  • ಎಂ. ಶಿವಶಂಕರ್-ಸಹಾಯಕ ನಿರ್ದೇಶಕರು, ಪೊಲೀಸ್ ಅಕಾಡೆಮಿ
  • ಜಿ. ಕೇಶವಮೂರ್ತಿ-ಡಿವೈಎಸ್‌ಪಿ, ಸಿಐಡಿ
  • ಎಚ್.ಎಸ್. ಜಗದೀಶ್-ಎಸಿಪಿ, ಡಿಜಿಪಿ ಕಚೇರಿ
  • ಎಂ.ಎನ್. ನಾಗರಾಜು-ಡಿವೈಎಸ್‌ಪಿ, ಸಿಐಡಿ
  • ಬಿ. ಗಿರೀಶ್-ಡಿವೈಎಸ್‌ಪಿ-ಲೋಕಾಯುಕ್ತ ಸಂಸ್ಥೆ
  • ಬಿ.ಎನ್. ಶ್ರೀನಿವಾಸ್-ಡಿವೈಎಸ್‌ಪಿ, ಸಿಐಡಿ
  • ಅಂಜುಮಾಲ ಟಿ. ನಾಯ್ಕ - ಡಿವೈಎಸ್‌ಪಿ, ಸಿಐಡಿ
  • ಆರ್.ಪಿ. ಅಶೋಕ್-ಇನ್‌ಸ್ಪೆಕ್ಟರ್, ಸದಾಶಿವನಗರ ಸಂಚಾರ ಠಾಣೆ
  • ಅನಿಲ್ ಕುಮಾರ್ ಬಿ. ಗ್ರಾಂಪುರೋಹಿತ್-ಇನ್‌ಸ್ಪೆಕ್ಟರ್-ಸಿಸಿಬಿ
  • ರಾಮಪ್ಪ ಬಿ. ಗುತ್ತೇರ್-ಇನ್‌ಸ್ಪೆಕ್ಟರ್, ತಾವರೆಕೆರೆ ಠಾಣೆ
  • ವಿ. ಬಂಗಾರು-ಎಆರ್‌ಎಸ್‌ಐ, ಕೆಎಸ್‌ಆರ್‌ಪಿ
  • ಶಂಕರ-ಹೆಡ್‌ಕಾನ್‌ಸ್ಟೆಬಲ್ ಡಿಎಆರ್ ಉಡುಪಿ
  • ಕೆ. ವೆಂಕಟೇಶ್-ಹೆಡ್‌ಕಾನ್‌ಸ್ಟೆಬಲ್, ಡಿಪಿಓ
  • ಎಸ್. ಕುಮಾರ್-ಹೆಡ್ ಕಾನ್‌ಸ್ಟೆಬಲ್, ಎಸ್‌ಸಿಆರ್‌ಬಿ

2023ನೇ ಸಾಲಿನಲ್ಲಿ 2 ಪದಕ

ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ನೀಡುವ ‘ಕೇಂದ್ರ ಗೃಹ ಸಚಿವರ ಪದಕ’ಕ್ಕೆ ರಾಮಪ್ಪ ಬಿ. ಗುತ್ತೇರ್ ಭಾಜರಾಗಿದ್ದರು. ಇದೀಗ ಸ್ವಾತಂತ್ರ್ಯ ದಿನಾಚರಣೆಗೆ ಅತ್ಯುತ್ತಮ ಸೇವೆಗೆ ನೀಡುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಸಹ ಲಭಿಸಿರುವುದಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net