ಎನ್​ಪಿಆರ್​ಗೆ ರಾಷ್ಟ್ರಪತಿ ಮೊದಲ ಸೇರ್ಪಡೆ

President
Published on

ನವದೆಹಲಿ: ಇದೇ ಏಪ್ರಿಲ್ 1ರಂದು ದೇಶದಾದ್ಯಂತ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್)- 2020 ಪ್ರಕ್ರಿಯೆ ಆರಂಭವಾಗಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ ಪಟ್ಟಿಗೆ ಸೇರ್ಪಡೆಯಾಗಲಿರುವ ಮೊದಲ ಪ್ರಜೆಯಾಗಲಿದ್ದಾರೆ.

ಎನ್​ಪಿಆರ್ ಬಗ್ಗೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಬಲವಾದ ಸಂದೇಶವನ್ನು ಜನರಿಗೆ ಸಾರಲು ಇದು ಸಹಾಯಕವಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏತನ್ಮಧ್ಯೆ, ಎನ್​ಪಿಆರ್​ನ ಪ್ರಶ್ನಾವಳಿ ಬಗ್ಗೆ ಸರ್ಕಾರ ‘ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ’ ಎಂದು ಕೇಂದ್ರ ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net