ಟ್ರಂಪ್​ ಕುಟುಂಬಕ್ಕೆ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಯಾವೆಲ್ಲಾ ಖಾದ್ಯ ತಯಾರಿಸಲಾಗಿತ್ತು?

Trump Dinner
Published on

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸ ಮುಗಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕುಟುಂಬ ಇಂದು ರಾತ್ರಿ 10:30ರ ಸುಮಾರಿಗೆ ಅಮೆರಿಕಗೆ ಪ್ರಯಾಣ ಬೆಳೆಸಿತು.

ತವರಿಗೆ ತೆರಳುವ ಮುನ್ನ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಏರ್ಪಡಿಸಿದ್ದ ವಿಶೇಷವಾದ ಔತಣಕೂಟದಲ್ಲಿ ಭಾಗಿಯಾಗಿ ಟ್ರಂಪ್​ ಕುಟುಂಬ ಬಗೆ ಬಗೆಯ ಖಾದ್ಯವನ್ನು ಸವಿಯಿತು.

ರಾಷ್ಟ್ರಪತಿ ಭವನದಲ್ಲಿ ಟ್ರಂಪ್ ಕುಟುಂಬ ಹಾಗೂ ಅಮೆರಿಕದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಔತಣಕೂಟದಲ್ಲಿ ದೇಶಿ ಶೈಲಿಯ ಬಗೆಬಗೆಯ ಖಾದ್ಯಗಳನ್ನು ಬಡಿಸಲಾಗಿತ್ತು. ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳೆರಡನ್ನು ಸಿದ್ಧಪಡಿಸಲಾಗಿತ್ತು.

ಆಲೂ ಟಿಕ್ಕಿ, ಸ್ಪಿನಾಚ್ ಪಾಪಡಿ, ಸಲ್ಮೊನ್ ಫಿಶ್ ಟಿಕ್ಕಾ, ದಾಲ್ ರೈಸಿನಾ ಸೇರಿ ಹಲವು ಪ್ರಮುಖ ಖಾದ್ಯಗಳನ್ನು ತಯಾರಿಸಲಾಗಿತ್ತು. ಇವುಗಳಲ್ಲಿ ದಾಲ್ ರೈಸಿನಾ ತಯಾರಿಸಲು ಲಖನೌದಿಂದ ವಿವಿಧ ಮಸಾಲೆ ಪದಾರ್ಥಗಳನ್ನು ತರಿಸಲಾಗಿದ್ದು, ಇದರ ತಯಾರಿಕೆಗೆ ಸುಮಾರು 48 ಗಂಟೆ ಬೇಕಾಗುತ್ತದೆ ಎಂದು ತಿಳಿದುಬಂದಿದೆ. ಸೋಮವಾರ ಅಹಮದಾಬಾದ್​ನಲ್ಲಿ ಟ್ರಂಪ್ ದಂಪತಿಗೆ ಖಾಮನ್, ಗುಜರಾತ್​ನ ವಿಶೇಷ ಶುಂಠಿ ಚಹ, ಸಮೋಸಾ, ಐಸ್ ಚಹ ಹಾಗೂ ಎಳನೀರು ನೀಡಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net