ಎನ್​ಟಿಆರ್​ ಭಾವಚಿತ್ರವಿರುವ 100 ರೂ. ಮುಖಬೆಲೆಯ ನಾಣ್ಯ ಅನಾವರಣಗೊಳಿಸಿದ ಕೇಂದ್ರ ಸರ್ಕಾರ

Untitled design (88)
Published on

ನವದೆಹಲಿ: ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್ ಅವರ ಹೆಸರಿನಲ್ಲಿ ಇಂದು (ಆಗಸ್ಟ್​ 28) 100 ರೂ. ಮುಖಬೆಲೆಯ ನಾಣ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತವಾಗಿ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಎನ್‌ಟಿಆರ್‌ ಅವರ ಕುಟುಂಬದ ಸದಸ್ಯರಾದ ನಂದಮೂರಿ ಬಾಲಕೃಷ್ಣ, ಪುರಂದರೇಶ್ವರಿ, ರಾಮಕೃಷ್ಣ, ಮತ್ತಿತರರು ಪಾಲ್ಗೊಂಡಿದ್ದರು. ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು, ಬಿಜೆಪಿ ಸಂಸದರು ಸೇರಿದಂತೆ ಹಲವರು ಎನ್​ಟಿಆರ್​ ಅವರ 100 ರೂ. ನಾಣ್ಯ ಅನಾವರಣದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

100 ರೂ. ನಾಣ್ಯವನ್ನು ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.5 ನಿಕಲ್ ಮತ್ತು ಶೇ.5 ಸತುವುಗಳಿಂದ ರೂಪಿಸಲಾಗಿದೆ. ಈ ಸಂಗತಿ ಎನ್‌ಟಿಆರ್‌ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದ್ದು, ಇದೊಂದು ಹೆಮ್ಮೆಯ ಕ್ಷಣವಾಗಿದೆ. ಕೇಂದ್ರ ಸರ್ಕಾರ ಅನಾವರಣಗೊಳಿಸಿದ 100 ರೂ. ಮುಖಬೆಲೆ ನಾಣ್ಯದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net