20 ಕಿಮೀಗೊಬ್ಬರಂತೆ ಮೈಲಿಗೂಲಿ ನೇಮಕಕ್ಕೆ ತಯಾರಿ

road
Published on

ಬೆಂಗಳೂರು: ಕೆಲವು ದಶಕಗಳ ಹಿಂದೆ ಜಾರಿಯಲ್ಲಿದ್ದ ರಸ್ತೆ ನಿರ್ವಹಣೆ ಮಾಡುವ ಮೈಲಿಗೂಲಿ ವ್ಯವಸ್ಥೆ ಮರು ಜಾರಿ ಮಾಡಲು ಸರ್ಕಾರ ಮುಂದಾಗಿದೆ. 20 ಕಿಮೀಗೆ ಒಬ್ಬರಂತೆ 2 ಸಾವಿರ ಮಂದಿಯನ್ನು ಮೈಲಿಗೂಲಿಗಳಾಗಿ ತಕ್ಷಣ ನೇಮಕ ಮಾಡಲಾಗುತ್ತದೆ. ಬಂದಾಗ ಆಗುವ ಸಮಸ್ಯೆ, ಗುಂಡಿ ಬಿದ್ದರೆ ಅವರೇ ಸ್ಥಳದಲ್ಲಿದ್ದು ಗಮನಿಸುತ್ತಾರೆ. ಪ್ರಸ್ತುತ ಟೆಂಡರ್ ಕರೆಯಬೇಕು, ಪ್ರಕ್ರಿಯೆ ದೀರ್ಘವಾಗಿರುತ್ತದೆ. ಈ ಮೈಲಿಗೂಲಿಗಳನ್ನು ಖಾಯಂ ನೇಮಕ ಮಾಡಲು ಆಗಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈಲಿಗೂಲಿ ಪದ್ಧತಿ ಖಾಯಂ ಇತ್ತು. ಈಗ ಹೊರಗುತ್ತಿಗೆ ಆಧಾರಿತವಾಗಿ ಮಾಡುತ್ತಿದ್ದೇವೆ. ಹಾಗೆಯೇ, ಮುಂದೆ ನಮ್ಮ ರಸ್ತೆಗಳನ್ನು ಐದು ವರ್ಷ ನಿರ್ವಹಣೆ ಗುತ್ತಿಗೆದಾರರೇ ಮಾಡಬೇಕಾಗುತ್ತದೆ. ಜತೆಗೆ ಐಬಿಗಳ ನಿರ್ವಹಣೆಗೆ 2-3 ಜನರ ಸೇವೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುತ್ತೇವೆ ಎಂದು ಹೇಳಿದರು.

ಕಾಲು ಸಂಕ

ಮಲೆನಾಡಲ್ಲಿ ಶಾಲಾ ಮಕ್ಕಳು ಕಾಲು ಸಂಕದ ಮೇಲೆ ನಡೆಯುತ್ತಿದ್ದು, ಅಪಾಯದಲ್ಲಿ ಓಡಾಡುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಮಾಡಲು 15-20 ಲಕ್ಷ ರೂ. ವೆಚ್ಚದ ತೂಗು ಸೇತುವೆ ನಿರ್ಮಿಸಲಾಗುತ್ತದೆ. ಒಟ್ಟು 325 ತೂಗು ಸೇತುವೆ ನಿರ್ಮಾಣ ಮಾಡುತ್ತಿದ್ದು, ಕಾರವಾರ, ಶಿವಮೊಗ್ಗ, ಮಂಗಳೂರು, ಉಡುಪಿ ಕಡೆಗಳಲ್ಲಿ ಮಾಡುತ್ತೇವೆ. ಇದನ್ನು ಒಟ್ಟಿಗೆ ಮಾಡಲು ಆಗಲ್ಲ 6 ತಿಂಗಳು ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ವಿವರಿಸಿದರು.

ಬೇಡಿಕೆ ಈಡೇರಿಕೆ

ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅವರ ಸಮಸ್ಯೆಗಳನ್ನ ಬಗೆಹರಿಸಲಾಗುತ್ತದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಿದ್ದೇವೆ. ಸರ್ಕಾರ ಮಠ, ಶಾಲೆಗಳನ್ನು ಕಟ್ಟಲು ಜಾಗ ಕೊಟ್ಟಿವೆ. ಎಲ್ಲಾ ಸರ್ಕಾರಗಳು ಇದನ್ನು ಮಾಡಿವೆ , ನಮ್ಮ ಸರ್ಕಾರವೂ ಮಾಡುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net