100 ಅಡಿ ಉದ್ದದ ವೇದಿಕೆ ನಿರ್ಮಿಸಲು ಸಿದ್ಧತೆ

27-06-25--krs2
ಕೃಷ್ಣರಾಜಸಾಗರ ಅಣೆಕಟ್ಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಕೆ.ಆರ್.ಸಾಗರದಲ್ಲಿ ಬೃಹತ್ ವೇದಿಕೆ ಸಿದ್ಧ ಮಾಡಲಾಗುತ್ತಿದೆ.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 30 ರಂದು ಬೆಳಗ್ಗೆ 10.30 ಗಂಟೆಗೆ ಕಾವೇರಿ ಮಾತೆಗೆ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಬಾಗಿನ ಅರ್ಪಿಸುವ ಕಾರಣ 100 ಅಡಿ ಬೃಹತ್ ವೇದಿಗೆ ನಿರ್ಮಿಸಲು ಶುಕ್ರವಾರ ಸಿದ್ಧತೆ ನಡೆದಿದೆ.

ಈ ಬಾರಿ ಸುಮಾರು 5 ಸಾವಿರ ಜನರು ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆಯನ್ನು ಕೆ.ಆರ್.ಸಾಗರದ ಬೃಂದಾವನದಲ್ಲಿರುವ ಕಾವೇರಿ ಪ್ರತಿಮೆ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿವರ್ಷ ಮುಖ್ಯಮಂತ್ರಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿ ಬುರುತ್ತಿದ್ದಂತೆ ಕಾವೇರಿ ಪ್ರತಿಮೆ ಮುಂಭಾಗದ ಎಡಭಾಗದಲ್ಲಿ ವೇದಿಕೆ ಇರುತ್ತಿತ್ತು. ಈ ಬಾರಿ ಹಲವು ಮಾರ್ಪಾಡುಗಳಿಂದ ಕೂಡಿದೆ. ವೇದಿಕೆಯನ್ನು ಕಾವೇರಿ ಮಾತೆಗೆ ಮುಖವಾಗಿ ನಿರ್ಮಿಸಲಾಗುತ್ತಿದ್ದು ಸುಮಾರು 100 ಅಡಿ ಉದ್ದ ಹಾಗೂ 40 ಅಡಿ ಅಗಲ ಇದೆ. ಮಳೆಯಾದರೂ ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂದು ಆಧುನಿಕ ರೀತಿಯಲ್ಲಿನ ವೇದಿಕೆ ಸಿದ್ಧವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net