ಹುಟ್ಟುವಾಗ್ಲೇ 2 ಗುಪ್ತಾಂಗ ಹೊಂದಿರುವ ಮಹಿಳೆ: ಒಂದು ಕೆಲಸಕ್ಕೆ, ಮತ್ತೊಂದು ಸಂಗಾತಿಗಂತೆ!

Evyline
Published on

ಬ್ರಿಸ್ಬೇನ್​: ವಿರಾಳಾತಿ ವಿರಳ ವೈದ್ಯಕೀಯ ಸ್ಥಿತಿಯಿಂದಾಗಿ ಹುಟ್ಟುವಾಗಲೇ ಎರಡು ಜನನಾಂಗಗಳನ್ನು ಹೊಂದಿರುವ ಮಾಜಿ ಅಂಗರಕ್ಷಕಿಯೊಬ್ಬಳು ತಾನು ಹೇಗೆ ಗರ್ಭಿಣಿಯಾದೆ ಎಂಬುದನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಓನ್ಲಿ ಫ್ಯಾನ್ಸ್​ ಅಕೌಂಟ್​ (ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಖರೀದಿಸುವ ಜಾಲತಾಣ ವೇದಿಕೆಯಾಗಿದ್ದು, ಇದನ್ನು 2016ರಲ್ಲಿ ಲಾಂಚ್​ ಮಾಡಲಾಯಿತು) ನಲ್ಲಿ ತನ್ನ ಭಾವಿ ಪತಿ ಮತ್ತು ಇಬ್ಬರು ಗೆಳತಿಯರೊಂದಿಗಿನ ಫೋರ್​ಸಮ್​ ವಿಡಿಯೋವನ್ನು ರೆಕಾರ್ಡ್​ ಮಾಡಿದ ಬಳಿಕ ಈ ವಿಚಾರವನ್ನು ಮಾಜಿ ಅಂಗರಕ್ಷಕಿ ಹೇಳಿಕೊಂಡಿದ್ದಾಳೆ.

ಅಂದಹಾಗೆ ಮಾಜಿ ಅಂಗರಕ್ಷಕಿ ಹೆಸರು ಎವೆಲಿನ್ (30)​. ಈಕೆ ಕ್ವೀನ್ಸ್​ಲ್ಯಾಂಡ್​ನ ಗೋಲ್ಡ್​ ಕೋಸ್ಟ್​ ಮೂಲದವಳು. ಗರ್ಭಾಶಯದ ಡಿಡೆಲ್ಫಿಸ್ ಎಂದು ಕರೆಯಲ್ಪಡುವ ವಿರಾಳಾತಿ ವಿರಳ ವೈದ್ಯಕೀಯ ಸ್ಥಿತಿಯಿಂದಾಗಿ ಎರಡು ಜನನಾಂಗಗಳನ್ನು ಹೊಂದಿದ್ದಾರೆ.

ಕೈಲೆ ಮತ್ತು ಜಾಕಿ ಹೆಸರಿನ ಜೋಡಿ ರೇಡಿಯೋ ಮಾಧ್ಯಮದ ಸಂದರ್ಶನದಲ್ಲಿ ಎವೆಲಿನ್​ ಮನಬಿಚ್ಚಿ ಮಾತನಾಡಿದ್ದಾರೆ. ಸದ್ಯ ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಮೊದಲು ಸೆಕ್ಸ್​ ವರ್ಕರ್​ ಸಹ ಆಗಿದ್ದ ಎವೆಲಿನ್​, ತನ್ನ ಕೆಲಸವನ್ನು ಬಿಟ್ಟು ಚಂದಾದಾರ ಆಧಾರಿತ ಸೇವೆಯನ್ನು ನೀಡುತ್ತಿದ್ದಾರೆ.

ನಾನು ಸೆಕ್ಸ್​ ವರ್ಕರ್​ ಮತ್ತು ಬೆಂಗಾವಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದೆ. ಜನನಾಂಗದ ಒಂದು ಭಾಗವನ್ನು ಕೆಲಸಕ್ಕಾಗಿಯೂ ಮತ್ತು ಇನ್ನೊಂದನ್ನು ನನ್ನ ವೈಯಕ್ತಿಕ ಜೀವನಕ್ಕಾಗಿ ಬಳಸುತ್ತಿದ್ದೆ. ನಾನು ಮತ್ತು ನನ್ನ ಭಾವಿ ಪತಿ ನನ್ನ ಸಾಕಷ್ಟು ಗೆಳತಿಯರ ಜತೆ ಸೇರಿ ವಿಡಿಯೋ ಮಾಡಿದ್ದೇವೆ. ಇದು ಖುಷಿಯಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ಎವೆಲಿನ್​ ಹೇಳಿದ್ದಾರೆ. ಅಂದಹಾಗೆ ಎವೆಲಿನ್,​ ಓನ್ಲಿಫ್ಯಾನ್ಸ್ ಖಾತೆಯಲ್ಲಿ ಶೇಕಡ 0.18 ರಷ್ಟು ಗಳಿಸುವ ಮೂಲಕ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

ಸೆಕ್ಸ್​ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವಾಗ ಎವೆಲಿನ್​ ತನ್ನ ವಿರಳ ಸ್ಥಿತಿಯನ್ನು ದೀರ್ಘ ಸಮಯದವರೆಗೆ ಮುಟ್ಟಿದ್ದರಂತೆ. ಗೊತ್ತಾದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರೊಂದಿಗೆ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ. ಒಂದೆರಡು ಗ್ರಾಹಕರು ಇದನ್ನು ಕಂಡುಹಿಡಿದಿದ್ದರು. ಏನೋ ತಪ್ಪಾಗಿದೆ ಎಂದು ಹೇಳಿದರು. ಒಂದು ಹಂತದಲ್ಲಿ ನನ್ನನ್ನು ಪುರುಷ ಎಂದು ಆರೋಪಿಸಲಾಯಿತು. ಆದರೆ, ಸ್ತ್ರೀರೋಗತಜ್ಞರಾಗಿದ್ದ ಇನ್ನೊಬ್ಬರು ಇದು ವೈದ್ಯಕೀಯ ಪರೀಕ್ಷೆಯಾಗಿ ಮಾರ್ಪಟ್ಟಿದೆ ಎಂದರು.

ಎರಡು ಜನನಾಂಗದಲ್ಲಿ ಎವೆಲಿನ್ ತನ್ನ ಗ್ರಾಹಕರೊಂದಿಗೆ ತನ್ನ ಕನಿಷ್ಠ ನೆಚ್ಚಿನ 'ಎಡಭಾಗ' ಬಳಸಿ ಲೈಂಗಿಕ ಸಂಬಂಧ ಹೊಂದಿದ್ದರಂತೆ. ಆದರೆ, ತನ್ನ 'ಬಲಭಾಗ'ವನ್ನು ತನ್ನ ಸಂಗಾತಿಗಾಗಿ ಮಾತ್ರ ಮೀಸಿಲಿಟ್ಟಿದ್ದರಂತೆ. ಬಲಭಾಗದ್ದು ಒಳ್ಳೆಯದು. ಹೀಗಾಗಿ ನಾನು ಸರಿಯಾದದನ್ನು ಇಷ್ಟಪಡುತ್ತೇನೆ. ಆದ್ದರಿಂದ ನಾನು ಮತ್ತು ನನ್ನ ಸಂಗಾತಿಗಾಗಿ ಅದನ್ನು ಉಳಿಸುತ್ತೇನೆ. ಎಡಭಾಗವನ್ನು ನನ್ನ ಕೆಲಸಕ್ಕಾಗಿ ಬಳಸುತ್ತೇನೆಂದು ಎವೆಲಿನ್​ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಒಂದು ಕೆಲಸಕ್ಕಾಗಿ ಮತ್ತು ಇನ್ನೊಂದು ನನ್ನ ಗೆಳೆಯನಿಗಾಗಿ ಎಂದು ನಾನು ಸದಾ ತಮಾಷೆ ಮಾಡುತ್ತಿದ್ದೆ. ಹೀಗಾಗಿ ಇದು ಮೋಸವಲ್ಲ ಎಂದಿದ್ದಾರೆ. ನಾವು ಅದೃಷ್ಟವಂತರು ಎಂದು ಭಾವಿಸಿರುವ ಎವೆಲಿನ್​, ತನ್ನ ಬಲಭಾಗದ ಜನನಾಂಗದಿಂದ ಗರ್ಭಿಣಿಯಾಗಿರುವುದಾಗಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಎವೆಲಿನ್​ ದಂಪತಿಗೆ ಗಂಡು ಮಗುವಿನ ನಿರೀಕ್ಷೆ ಇದೆ. ತನ್ನ 'ಎಡ' ಮತ್ತು 'ಬಲ' ಯೋನಿಗಳ ನಡುವೆ ಗೋಡೆ ಇರುವುದರಿಂದ ಸಿಸೇರಿಯನ್ ಮೂಲಕ ಗಂಡು ಮಗುವನ್ನು ತೆಗೆಯಬೇಕಾಗಿದೆ ಎವೆಲಿನ್​ ಹೇಳಿದ್ದಾರೆ. ನನ್ನಿಂದ ಸ್ವಾಭಾವಿಕವಾಗಿ ಜನನ ನೀಡಲು ಸಾಧ್ಯವಿಲ್ಲ. ಎರಡು ಜನನಾಂಗಳ ಮಧ್ಯೆ ಒಂದು ಗೋಡೆ ರೀತಿ ಇದೆ. ನನ್ನ ಗರ್ಭಾಶಯ ಎರಡೂ ತುಂಬಾ ಚಿಕ್ಕದಾಗಿರುವುದರಿಂದ ನಾನು ಮಗುವನ್ನು 30 ವಾರಗಳಲ್ಲಿ ಯಾವುದೇ ಸಮಯದಲ್ಲಿ ಹೊಂದಬಹುದು ಎಂದಿದ್ದಾರೆ.

ತನಗೆ ಎರಡು ಜನನಾಂಗಗಳು ಇರುವುದು ಎವೆಲಿನ್​ಗೆ ಹತ್ತು ವರ್ಷಗಳ ಹಿಂದೆ ತಿಳಿಯಿತಂತೆ. 20 ವರ್ಷದವಳಿದ್ದಾಗ ಗರ್ಭಿಣಿಯಾಗಿದ್ದೆ. ಅದನ್ನು ತೆಗೆಸಲು ಆಸ್ಪತ್ರೆಗೆ ಹೋಗಿದ್ದೆ. ವೈದ್ಯರು ಅದನ್ನು ತೆಗೆದರು. ಈ ವೇಳೆ ಸ್ಕ್ಯಾನ್​ ದಾಖಲೆಯಿಂದ ನನಗೆ ಎರಡು ಜನನಾಂಗ ಇರುವುದು ತಿಳಿಯಿತು ಎಂದಿದ್ದಾರೆ. ಹೀಗಾಗಿ ನನಗೆ ಎರಡು ಯೋನಿಗಳು, ಎರಡು ಗರ್ಭಕಂಠಗಳು, ಎರಡು ಗರ್ಭಕೋಶಗಳು ಮತ್ತು ಅಂಡಾಶಯವನ್ನು ಪ್ರತಿಯೊಂದಕ್ಕೂ ಜೋಡಿಸಲಾಗಿದೆ. ಹಾಗಾಗಿ ಒಂದೇ ಸಮಯದಲ್ಲಿ ಎರಡು ಶಿಶುಗಳನ್ನು ಹೊಂದಬಹುದು ಎಂದು ಎವೆಲಿನ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net